ಮೊಬೈಲ್ ಇಂಟರ್ ನೆಟ್ ಡಾಟಾ ಖಾಲಿ ಮಾಡಿದ ಎಂದು ತಮ್ಮನನ್ನೇ ಇರಿದು ಕೊಂದ ಅಣ್ಣ!

ಮೊಬೈಲ್ ಇಂಟರ್ ನೆಟ್ ಡಾಟಾ ಖಾಲಿ ಮಾಡಿದ ಎಂದು ಆಕ್ರೋಶಗೊಂಡ ವ್ಯಕ್ತಿಯೋರ್ವ ಸ್ವಂತ ತಮ್ಮನನ್ನೇ ಇರಿದುಕೊಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Published: 20th November 2020 08:48 PM  |   Last Updated: 20th November 2020 08:48 PM   |  A+A-


Murder

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ಜೋಧ್ ಪುರ: ಮೊಬೈಲ್ ಇಂಟರ್ ನೆಟ್ ಡಾಟಾ ಖಾಲಿ ಮಾಡಿದ ಎಂದು ಆಕ್ರೋಶಗೊಂಡ ವ್ಯಕ್ತಿಯೋರ್ವ ಸ್ವಂತ ತಮ್ಮನನ್ನೇ ಇರಿದುಕೊಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ರಾಜಧಾನಿ ಜೋಧ್ ಪುರದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೀಡಾದ ಯುವಕನನ್ನು 23 ವರ್ಷದ ರಾಯ್ ಎಂದು ಗುರುತಿಸಲಾಗಿದ್ದು, ಆತನ ಅಣ್ಣ ರಾಮನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಬುಧವಾರ ಸಂಜೆ ರಾಮನ್ ತನ್ನ ಕಿರಿಯ ಸಹೋದರ ರಾಯ್ ನನ್ನು ಮನೆಯ ಟೆರೆಸ್ ಮೇಲೆ ಕರೆದೊಯ್ದು ಮೊಬೈಲ್ ಡಾಟಾ ಖಾಲಿ ಮಾಡಿದ್ದಕ್ಕಾಗಿ ಬೈಯ್ಯತೊಡಗಿದ್ದ. ಈ ವೇಳೆ ಕ್ರೋಧದಿಂದ ಹರಿತವಾದ ಆಯುಧದಿಂದ ರಾಯ್ ನ ಎದೆಗೆ 4 ರಿಂದ 5 ಬಾರಿ ಇರಿದಿದ್ದಾನೆ. ತೀವ್ರ  ರಕ್ತಸ್ರಾವದಿಂದ ರಾಯ್ ನೆಲಕ್ಕುರುಳಿದ್ದು, ಈ ವೇಳೆ ರಾಮನ್ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಚಾರ ತಿಳಿದ ಪೋಷಕರು ಟೆರೆಸ್ ಮೇಲೆ ತೆರಳಿದಾಗ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಕೂಡಲೇ ಆತನನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ, ವಿಚಾರ ತಿಳಿದ ಪೊಲೀಸರು ರಾಮನ್ ನನ್ನು ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದಾರೆ.  ಮೂಲಗಳ ಪ್ರಕಾರ ರಾಮನ್ ಮಾನಸಿಕ ಅಸ್ವಸ್ಥನಾಗಿದ್ದ. ಇದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದ ಪೋಷಕರು ಮಾಹಿತಿ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp