ಹತ್ಯೆಯಾದ ಜೆಇಎಂ ಉಗ್ರರು ಅಂತರಾಷ್ಟ್ರೀಯ ಗಡಿಯಲ್ಲಿ ಪತ್ತೆಯಾದ ಸುರಂಗದಿಂದ ಭಾರತಕ್ಕೆ ಬಂದಿದ್ದರು!
ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ.
Published: 23rd November 2020 01:54 PM | Last Updated: 23rd November 2020 02:07 PM | A+A A-

ಎನ್ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾಪಡೆಗಳು
ನವದೆಹಲಿ: ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ.
ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲಿದೆ. ಇತ್ತೀಚೆಗಷ್ಟೇ ಹತ್ಯೆಯಾದ ನಾಲ್ವರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭಾರತಕ್ಕೆ ನುಸುಳಲು ಬಳಿಸಿದ್ದ ಸುರಂಗವನ್ನು ಭಾರತೀಯ ಸೇನಾಪಡೆಗಳು ಪತ್ತೆ ಹಚ್ಚಿದೆ.
ಅಂತರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕಾಶ್ಮೀರದ ಸಾಂಬಾ ವಲಯದಲ್ಲಿ ಮೂರು ದಿನಗಳ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ 150 ಮೀಟರ್ ಉದ್ದದ ಈ ಸುರಂಗ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿ ಭಾರೀ ಬಂದೋಬಸ್ತ್ ನಿಯೋಜಿಸುವ ಕಾರಣ ಇಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಾರತದ ಗಡಿ ನುಸುಳಲು ಸಾಧ್ಯವೇ ಇಲ್ಲ. ಹೀಗಾಗಿ ಪಾಕಿಸ್ತಾನ ಉಗ್ರರು ಗುಪ್ತ ಸುರಂಗವೊಂದರ ಮೂಲಕ ಭಾರತ ಪ್ರವೇಶಿಸಿರಬಹುದು ಎಂದು ಗುಪ್ತಚರ ಇಲಾಖೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೂ ಬಿಎಸ್ಎಫ್ ಯೋಧರು ಮತ್ತು ಪೊಲೀಸರ ನಿರಂತರ ಶ್ರಮದ ಪರಿಣಾಮ ಸುರಂಗ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ.