ಕರ್ತಾರ್ಪುರ ಕಾರಿಡಾರ್: ಕೋವಿಡ್ ನಿಯಮಗಳ ಅನುಸಾರ ನಿರ್ಬಂಧ ಸಡಿಲಿಕೆ ಕುರಿತು ನಿರ್ಧಾರ- ಕೇಂದ್ರ ಸರ್ಕಾರ

ಕರ್ತಾರ್ಪುರ ಕಾರಿಡಾರ್'ನ್ನು ಪಾಕಿಸ್ತಾನ ಪುನರಾರಂಭ ಮಾಡಿದ್ದು, ಭಾರತೀಯ ಯಾತ್ರಾರ್ಥಿಗಳ ಪ್ರಯಾಣ ಕುರಿತು ಕೋವಿಡ್ ನಿಯಮಗಳ ಅನುಸಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕರ್ತಾರ್ಪುರ ಕಾರಿಡಾರ್'ನ್ನು ಪಾಕಿಸ್ತಾನ ಪುನರಾರಂಭ ಮಾಡಿದ್ದು, ಭಾರತೀಯ ಯಾತ್ರಾರ್ಥಿಗಳ ಪ್ರಯಾಣ ಕುರಿತು ಕೋವಿಡ್ ನಿಯಮಗಳ ಅನುಸಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆರೋಗ್ಯ ವ್ಯವಹಾರಗಳ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಎಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಕೋವಿಡ್ ನಿಯಮಗಳ ಅನುಸಾರ ಕರ್ತಾರ್ಪುರ ಕಾರಿಡಾರ್ ಮರಳಿ ಆರಂಭಿಸುವ ಕುರಿತು ಹಾಗೂ ನಿರ್ಬಂಧಗಳನ್ನು ಸಡಿಲಿಸುವ ಕುರಿತು ನಿರ್ಧಾರಕೈಗೊಳ್ಳಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. 

ನಿನ್ನೆಯಷ್ಟೇ ಪಾಕಿಸ್ತಾನ ಕರ್ತಾರ್ಪುರ ಕಾರಿಡಾರ್ ಪುನರಾರಂಭ ಮಾಡಿದೆ. 2019ರ ಉಭಯ ರಾಷ್ಟ್ರಗಳ ನಡುವೆ ನಡೆದಿರುವ ಒಪ್ಪಂದದಂತೆ ಪ್ರತೀನಿತ್ಯ ಭಾರತದಿಂದ ಬರುವ ಯಾತ್ರಾರ್ಥಿಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com