ಭಾರತದ ಉತ್ತರ ಗಡಿಯಲ್ಲಿ ಚೀನಾದಿಂದ 60 ಸಾವಿರ ಯೋಧರ ನಿಯೋಜನೆ: ಅಮೆರಿಕಾ

ಭಾರತದ ಉತ್ತರ ಗಡಿಯಲ್ಲಿ ಚೀನಾ ಬರೊಬ್ಬರಿ 60,000 ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೋಂಪೊಯೋ ಹೇಳಿದ್ದು, ಚೀನಾದು ಅತ್ಯಂತ ಕೆಟ್ಟ ವರ್ತನೆ ಎಂದು ವಿಶ್ಲೇಷಿಸಿದ್ದಾರೆ.
ಮೈಕ್ ಪೋಂಪಿಯೊ
ಮೈಕ್ ಪೋಂಪಿಯೊ

ವಾಷಿಂಗ್ ಟನ್: ಭಾರತದ ಉತ್ತರ ಗಡಿಯಲ್ಲಿ ಚೀನಾ ಬರೊಬ್ಬರಿ 60,000 ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೋಂಪೊಯೋ ಹೇಳಿದ್ದು, ಚೀನಾದು ಅತ್ಯಂತ ಕೆಟ್ಟ ವರ್ತನೆ ಎಂದು ವಿಶ್ಲೇಷಿಸಿದ್ದಾರೆ.

ಕ್ವಾಡ್ ರಾಷ್ಟ್ರಗಳು- ಇಂಡೋ ಫೆಸಿಫಿಕ್ ದೇಶಗಳಾದ ಅಮೆರಿಕ, ಜಪಾನ್, ಭಾರತ, ಆಸ್ಟ್ರೇಲೊಯಾದ ವಿದೇಶಾಂಗ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ನೀಡಿದ ಸಂದರ್ಶನದಲ್ಲಿ ಮೈಕ್ ಪೋಂಪಿಯೊ ಚೀನಾ ವಿರುದ್ಧ ಹರಿಹಾಯ್ದಿದ್ದು, ಚೀನಾದ್ದು ಅತ್ಯಂತ ಕೆಟ್ಟ ವರ್ತನೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಪರಿಸ್ಥಿತಿ ತಲೆದೋರಿದ ನಂತರ ಹಾಗೂ ಈಶಾನ್ಯ ಲಡಾಖ್ ನ ಎಲ್ಎಸಿಯಲ್ಲಿ ಚೀನಾ ತೋರಿದ ವರ್ತನೆಗಳ ನಂತರದಲ್ಲಿ, ವಿಶ್ವಾದ್ಯಂತ ಚೀನಾದ ವಿರುದ್ಧ ಅಭಿಪ್ರಾಯ ಮೂಡಿತ್ತಿದ್ದು, ಈ ಸಂದರ್ಭದಲ್ಲಿ ಕ್ವಾಡ್ ದೇಶಗಳ ವಿದೇಶಾಂಗ ಸಚಿವರು ಸಭೆ ನಡೆಸಿ ಚೀನಾದ ಬಗ್ಗೆ ಚರ್ಚಿಸಿರುವುದು ಮಹತ್ವ ಪಡೆದುಕೊಂಡಿದೆ. 

ಫಾಕ್ಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೈಕ್ ಪೋಂಪಿಯೋ, ಭಾರತದ ಉತ್ತರ ಭಾಗದ ಗಡಿಯಲ್ಲಿ ಚೀನಾ 60,000 ಸೈನಿಕರನ್ನು ನಿಯೋಜಿಸಿದೆ. ಕ್ವಾಡ್ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದೆ. ಎಲ್ಲರೂ ಸಹ ಚೀನಾದ ಕಮ್ಯುನಿಸ್ಟ್ ಪಕ್ಷ ಉಂಟುಮಾಡುತ್ತಿರುವ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಅವರ ರಾಷ್ಟ್ರಗಳಲ್ಲಿಯೂ ಇದು ಸ್ಪಷ್ಟವಾಗಿದೆ, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಮಾತುಕತೆ ನಡೆಯಿತು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸಂವೃದ್ಧಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಮೈಕ್ ಪೊಂಪಿಯೋ ತಿಳಿಸಿದ್ದಾರೆ. 

ಚೀನಾದ ಕಮ್ಯುನಿಸ್ಟ್ ಪಕ್ಷ ನಮ್ಮಗಳ ಮೇಲೆ ದಬ್ಬಾಳಿಕೆ ಮಾಡಲು ಕ್ವಾಡ್ ರಾಷ್ಟ್ರಗಳು ದೀರ್ಘಕಾಲ ಅವಕಾಶ ಮಾಡಿಕೊಟ್ಟಿದ್ದವು. ಜಾಗೃತವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲೂ ಚೀನಾ ದಬ್ಬಾಳಿಕೆ ಮಾಡುತ್ತಿದೆ. ಬೆದರಿಸುತ್ತಿದೆ, ಕ್ವಾಡ್ ದೇಶಗಳು ಚೀನಾದಿಂದ ಎದುರಾಗುತ್ತಿರುವ ಅಪಾಯವನ್ನು ಚರ್ಚಿಸಿವೆ. ಈ ಹೋರಾಟದಲ್ಲಿ ಕ್ವಾಡ್ ದೇಶಗಳಿಗೆ ಅಮೆರಿಕಾದ ಬೆಂಬಲ ಅಗತ್ಯವಾಗಿದೆ ಎಂದು ಮೈಕ್ ಪೊಂಪಿಯೋ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com