ಉತ್ತರ ಪ್ರದೇಶ: ಮನೆಯಲ್ಲಿ ಮಲಗಿದ್ದ 3 ದಲಿತ ಸಹೋದರಿಯರ ಮೇಲೆ ಆಗಂತುಕರಿಂದ ಆ್ಯಸಿಡ್ ದಾಳಿ!

ಕಳೆದ ರಾತ್ರಿ ಮನೆಯಲ್ಲಿ ಮಲಗಿದ್ದ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. 

Published: 13th October 2020 07:27 PM  |   Last Updated: 13th October 2020 07:59 PM   |  A+A-


For representational purposes

ಸಂಗ್ರಹ ಚಿತ್ರ

Posted By : Vishwanath S
Source : The New Indian Express

ಲಖನೌ: ಕಳೆದ ರಾತ್ರಿ ಮನೆಯಲ್ಲಿ ಮಲಗಿದ್ದ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. 

ಉತ್ತರಪ್ರದೇಶದ ಗೋಂಡಾದ ಪರಸಪುರದಲ್ಲಿ ಈ ಘಟನೆ ನಡೆದಿದ್ದು ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಹೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಯಾರು, ಏಕೆ ಎಂಬುದು ತಿಳಿದುಬಂದಿಲ್ಲ. 

17 ವರ್ಷದ ಅಪ್ರಾಪ್ತ ಬಾಲಕಿಗೆ ಶೇಕಡ 30ರಷ್ಟು ಸುಟ್ಟು ಗಾಯಗಳಾಗಿವೆ. ಇನ್ನು 12 ಮತ್ತು 8 ವರ್ಷದ ಬಾಲಕಿಯರಿಗೆ 20ರಷ್ಟು ಮತ್ತು 5ರಷ್ಟು ಸುಟ್ಟ ಗಾಯಗಳಾಗಿದೆ ಎಂದು ಗೋಂಡಾದ ಎಸ್ ಪಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ. 

ಅಪ್ರಾಪ್ತೆಯರ ಮೇಲೆ ಕೆಮಿಕಲ್ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಭೇಡಿ ನೀಡಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು. 

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp