ಭಾರತ ಸೇರಿ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಪ್ರಮಾಣ ಇಳಿಕೆ; ಆದರೂ ಡಬ್ಲ್ಯೂ ಹೆಚ್ ಒ ನೀಡಿದೆ ಎಚ್ಚರಿಕೆ!

ಭಾರತ, ಬಾಂಗ್ಲಾದೇಶ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಸಂಖ್ಯೆ ಸತತವಾಗಿ ಕಡಿಮೆ ದಾಖಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೊರೋನಾದೆಡೆಗೆ ಯಾವುದೇ ನಿರ್ಲಕ್ಷ್ಯ, ಮೈಮರೆಯುವುದು ಹಾಗೂ ನಿಯಮಗಳನ್ನು ಸಡಿಲಿಕೆ ಸಲ್ಲ ಎಂದು ಡಬ್ಲ್ಯೂ ಹೆಚ್ಒ ಎಚ್ಚರಿಕೆ ನೀಡಿದೆ. 

ಆಗ್ನೇಯ ಏಷ್ಯಾದ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಸ್ವಲ್ಪ ಕಡಿಮೆಯಾದಂತೆ ತೋರುತ್ತಿದೆ. ಆದರೆ ಕೊರೋನಾವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ, ಕೊರೋನಾ ಪ್ರಸಣದೆಡೆಗೆ ನಮ್ಮ ಪ್ರತಿಕ್ರಿಯೆ ಮತ್ತಷ್ಟು ಬಲಿಷ್ಠವಾಗಿರಬೇಕು ಹಾಗೂ ವೈರಾಣು ಹರಡುವಿಕೆಯನ್ನು ತಡಗಟ್ಟಬೇಕು ಎಂದು ಡಬ್ಲ್ಯೂ ಹೆಚ್ ಒ ನ ಆಗ್ನೇಯ ಏಷ್ಯಾ ಪ್ರದೇಶದ ನಿರ್ದೇಶಕರಾದ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. 

ಈಗ ಹಬ್ಬದ ದಿನಗಳು ಇದ್ದು, ಜೊತೆ ಜೊತೆಗೇ ಶೀತ ವಾತಾವರಣವೂ ಇರುವ ಕಾರಣದಿಂದಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರದೇ ಇದ್ದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳಲಿದೆ ಎಂದು ಖೇತ್ರಪಾಲ್ ಸಿಂಗ್ ಎಚ್ಚರಿಸಿದ್ದಾರೆ. 

ಇತ್ತೀಚಿನ ವಾರಗಳಲ್ಲಿ ಕಡಿಮೆಯಾಗುತ್ತಿರುವ ಕೊರೋನಾ ಪ್ರಕರಣಗಳೆಡೆಗೆ ಸಮಾಧಾನ ಸಲ್ಲ. ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗುತಿವೆ, ಕೊರೋನಾ ತಡೆಗಟ್ಟಲು ಇನ್ನೂ ಹೆಚ್ಚಿನ ಪ್ರಯತ್ನ ಅಗತ್ಯವಿದೆ ಎಂದು ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. 

ಈ ನಡುವೆ ಈವರೆಗೂ ಕೊರೋನಾವೈರಸ್ ಸೋಂಕು ಪತ್ತೆಯಾಗಿ ನಡೆಸಲಾಗಿರುವ ಒಟ್ಟಾರೇ,  ಪರೀಕ್ಷೆಗಳ ಸಂಖ್ಯೆ 9.5 ಕೋಟಿಯನ್ನು ದಾಟಿದೆ.ಅಕ್ಟೋಬರ್ ಮೂರನೇ ವಾರದಲ್ಲಿ ಸರಾಸರಿ ದೈನಂದಿನ ಪಾಸಿಟಿವ್ ದರ ಪ್ರಮಾಣವು ಶೇಕಡಾ 6.13 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com