ಕೋವಿಡ್-19: ಚೇತರಿಕೆಯಲ್ಲೂ ದಾಖಲೆ, 10 ರಾಜ್ಯಗಳಿಂದ ಶೇ.81ರಷ್ಟು ಚೇತರಿಕೆ!

ಈ ಹಿಂದೆ ಮಾರಕ ಕೊರೋನಾ ವೈರಸ್ ಸೋಂಕಿನ ಹೊಡೆತಕ್ಕೆ ಒಳಗಾಗಿ ಗರಿಷ್ಠ ಸೋಂಕಿತರನ್ನು ಹೊಂದಿ ಕುಖ್ಯಾತಿ ಪಡೆದಿದ್ದ 10 ರಾಜ್ಯಗಳಲ್ಲಿ ಇದೀಗ ದಾಖಲೆ ಪ್ರಮಾಣದ ಚೇತರಿಕೆ ಕಾಣುತ್ತಿದೆ.
ಕೋವಿಡ್-19 ಚೇತರಿಕೆ
ಕೋವಿಡ್-19 ಚೇತರಿಕೆ

ನವದೆಹಲಿ: ಈ ಹಿಂದೆ ಮಾರಕ ಕೊರೋನಾ ವೈರಸ್ ಸೋಂಕಿನ ಹೊಡೆತಕ್ಕೆ ಒಳಗಾಗಿ ಗರಿಷ್ಠ ಸೋಂಕಿತರನ್ನು ಹೊಂದಿ ಕುಖ್ಯಾತಿ ಪಡೆದಿದ್ದ 10 ರಾಜ್ಯಗಳಲ್ಲಿ ಇದೀಗ ದಾಖಲೆ ಪ್ರಮಾಣದ ಚೇತರಿಕೆ ಕಾಣುತ್ತಿದೆ.

ಈ ಬಗ್ಗೆ ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದ ಒಟ್ಟಾರೆ ಗುಣಮುಖರಾದ ಸೋಂಕಿತರ ಪ್ರಮಾಣದಲ್ಲಿ ಶೇ.81ರಷ್ಟು ಪ್ರಕರಣಗಳು ಕೇವಲ 10 ರಾಜ್ಯಗಳಲ್ಲಿ ವರದಿಯಾಗಿದೆ ಎಂದು ಹೇಳಿದೆ. ದೇಶದಲ್ಲಿ ನಿತ್ಯ ಸುಮಾರು 74 ಸಾವಿರ ಮಂದಿ ಸೋಂಕಿತರು ಗುಣಮುಖರಾಗುತ್ತಿದ್ದು, ಈ ಪೈಕಿ  ಶೇ.81ರಷ್ಟು ಗುಣಮುಖ ಪ್ರಕರಣಗಳು 10 ರಾಜ್ಯಗಳಿಂದ ವರದಿಯಾಗುತ್ತಿದೆ. ಇದೇ 10 ರಾಜ್ಯಗಳಲ್ಲೇ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.48ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದೂ ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ಪ್ರತಿ ನಿತ್ಯ ಅತೀ ಹೆಚ್ಚು ಗುಣಮುಖರನ್ನು ಹೊಂದಿರುವ ರಾಜ್ಯಗಳಲ್ಲಿ ಪಟ್ಟಿಯಲ್ಲಿ ಕೊವಿಡ್ ಹಾಟ್ ಸ್ಪಾಟ್ ಎಂದೇ ಕುಖ್ಯಾತಿ ಗಳಿಸಿರುವ ಮಹಾರಾಷ್ಟ್ರವಿದ್ದು, ಇಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16,177 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 13,217 ಮಂದಿ  ಸೋಂಕಿತರು ಗುಣಮುಖರಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ 7,593 ಮಂದಿ ಸೋಂಕಿತರು ಗುಣಮುಖರಾಗಿದ್ದು, ತಮಿಳುನಾಡಿನಲ್ಲಿ 4,314, ಆಂಧ್ರ ಪ್ರದೇಶದಲ್ಲಿ 3,723, ಪಶ್ಚಿಮ ಬಂಗಾಳದಲ್ಲಿ 3, 608, ಛತ್ತೀಸ್ ಘಡದಲ್ಲಿ 2,996, ರಾಜಧಾನಿ ದೆಹಲಿಯಲ್ಲಿ 2,727, ರಾಜಸ್ಥಾನದಲ್ಲಿ 2,654 ಮತ್ತು ಉತ್ತರ  ಪ್ರದೇಶದಲ್ಲಿ 2,581 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com