ಚೀನಾ ಗಡಿ ತಂಟೆ ಮಧ್ಯೆ ಭಾರತಕ್ಕೆ ನವಂಬರ್ 5ರಂದು ಮತ್ತೆ ಮೂರು 'ರಫೇಲ್' ಯುದ್ಧ ವಿಮಾನಗಳ ಆಗಮನ

ಕಳೆದ ಮೇ ತಿಂಗಳಿಂದ ಪೂರ್ವ ಲಡಾಕ್ ಪ್ರದೇಶದ ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ನಡುವೆಯೇ ನವಂಬರ್ 5ರಂದು ಭಾರತ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

Published: 28th October 2020 07:54 PM  |   Last Updated: 28th October 2020 08:02 PM   |  A+A-


France keen to begin talks for additional 36 Rafale jets, but India yet to take decision: Sources

ಸಂಗ್ರಹ ಚಿತ್ರ

Posted By : Vishwanath S
Source : UNI

ನವದೆಹಲಿ: ಕಳೆದ ಮೇ ತಿಂಗಳಿಂದ ಪೂರ್ವ ಲಡಾಕ್ ಪ್ರದೇಶದ ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ನಡುವೆಯೇ ನವಂಬರ್ 5ರಂದು ಭಾರತ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಅವರ ಉಪ ಸ್ಥಿತಿಯಲ್ಲಿ ಕಳೆದ ಸೆಪ್ಟಂಬರ್ 10ರಂದು ಹರಿಯಾಣದದ ಅಂಬಾಲ ವಾಯುನೆಲೆಯಲ್ಲಿ ಮೊದಲ ತಂಡದ ಐದು ಯುದ್ದ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿಕೊಳ್ಳಲಾಯಿತು.

2016ರ ಒಪ್ಪಂದದ ಪ್ರಕಾರ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ದ ವಿಮಾನಗಳನ್ನು ಭಾರತ ಫ್ರಾನ್ಸ್ ನಿಂದ  ಖರೀದಿಸುತ್ತಿದೆ. ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಈ ವಾರ ತಮ್ಮ ಐರೋಪ್ಯ ದೇಶಗಳ ಪ್ರವಾಸದ ವೇಳೆ ಫ್ರಾನ್ಸ್ ಗೂ ಭೇಟಿ ನೀಡಲಿದ್ದಾರೆ.

ತಮ್ಮ ಭೇಟಿಯ ವೇಳೆ ಅವರು ಫ್ರಾನ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್ ಎಸ್ ಸಿ) ಸಮರ್ಪಿತ ಸಮಾಲೋಚನೆಗಳೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp