ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಬಳಿ ಚೀನಾ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ: ಭಾರತ

ಪೂರ್ವ ಲಡಾಖ್ ನ ಪಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ ಎಂದು ಭಾರತ ಆರೋಪಿಸಿದೆ. 
ಭಾರತೀಯ ಸೇನಾ ಟ್ರಕ್
ಭಾರತೀಯ ಸೇನಾ ಟ್ರಕ್

ನವದೆಹಲಿ: ಪೂರ್ವ ಲಡಾಖ್ ನ ಪಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ ಎಂದು ಭಾರತ ಆರೋಪಿಸಿದೆ. 

ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಪ್ರಯತ್ನಿಸುತ್ತಿದೆ. ಚೀನಾ ಮತ್ತು ಭಾರತ ಎರಡು ಮಿಲಿಟರಿ ಮಾತುಕತೆ ನಡೆಸುತ್ತಿದ್ದರೂ ಚೀನಾ ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಆರೋಪಿಸಿದೆ. 

ಸಮಯೋಚಿತ ರಕ್ಷಣಾತ್ಮಕ ಕ್ರಮದಿಂದ ಯಥಾಸ್ಥಿತಿಯನ್ನು ಬದಲಿಸುವ ಚೀನಾದ ಏಕಪಕ್ಷೀಯ ಪ್ರಯತ್ನಗಳನ್ನು ಭಾರತ ತಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಇದೇ ವೇಳೆ ಇಂತಹ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳದಂತೆ ಚೀನಾವನ್ನು ಕೇಳಿಕೊಂಡಿದ್ದೇವೆ ಎಂದರು.

ಪಾಂಗಾಂಗ್ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದಲ್ಲಿ ಚೀನಾದ ಕಡೆಯವರು ಈ ಹಿಂದೆ ಒಪ್ಪಿದ ತಿಳುವಳಿಕೆಯನ್ನು ಉಲ್ಲಂಘಿಸಿದ್ದಾರೆ. ಆಗಸ್ಟ್ 29 ರ ತಡರಾತ್ರಿ ಮತ್ತು ಆಗಸ್ಟ್ 30 ರಂದು ಪ್ರಚೋದನಕಾರಿ ಮಿಲಿಟರಿ ತಂತ್ರಗಳಲ್ಲಿ ತೊಡಗಿದ್ದಾರೆ ಎಂದು ಅನುರಾಗ್ ಶ್ರೀವಾಸ್ತವ ಹೇಳಿದರು.

"ಇದಲ್ಲದೆ, ನಿನ್ನೆ ಆಗಸ್ಟ್ 31ರಂದು ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಎರಡೂ ಕಡೆಯ ಕಮಾಂಡರ್ಗಳು ಚರ್ಚೆಯಲ್ಲಿದ್ದಾಗಲೂ, ಚೀನಾದ ಪಡೆಗಳು ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದ್ದವು ಎಂದು ಅನುರಾಗ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com