ಕ್ವಾರಂಟೈನ್ ನಿಂದ ಬಿಡುಗಡೆಯ ಪ್ರಮಾಣಪತ್ರಕ್ಕಾಗಿ ಬಂದ ಮಹಿಳೆ ಮೇಲೆ ಅತ್ಯಾಚಾರ: ಹೆಲ್ತ್ ಇನ್ಸ್ ಪೆಕ್ಟರ್ ಬಂಧನ

ಕ್ವಾರಂಟೈನ್ ಬಿಡುಗಡೆ ಪ್ರಮಾಣ ಪತ್ರ ನೀಡುವುದಾಗಿ ಮಹಿಳೆಯನ್ನು ಮನೆಗೆ ಕರೆದು ಅತ್ಯಾಚಾರ ನಡೆಸಿದ ಕಿರಿಯ ಆರೋಗ್ಯ ನಿರೀಕ್ಷಕನೊಬ್ಬನನ್ನು ಇಲ್ಲಿನ ಪಂಗೊಡ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕ್ವಾರಂಟೈನ್ ಬಿಡುಗಡೆ ಪ್ರಮಾಣ ಪತ್ರ ನೀಡುವುದಾಗಿ ಮಹಿಳೆಯೊಬ್ಬರನ್ನು ಮನೆಗೆ ಕರೆದು ಅತ್ಯಾಚಾರ
ನಡೆಸಿದ ಕಿರಿಯ ಆರೋಗ್ಯ ನಿರೀಕ್ಷಕನೊಬ್ಬನನ್ನು ಇಲ್ಲಿನ ಪಂಗೊಡ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅತ್ಯಾಚಾರಕ್ಕೀಡಾದ ಮಹಿಳೆ ಕುಲಾಥುಪುಝಾ ನಿವಾಸಿಯಾಗಿದ್ದು, ಕೆಲಸ ಮಾಡುತ್ತಿದ್ದ ಮಲ್ಲಪುರಂನಿಂದ ವಾಪಸ್ಸಾದ ನಂತರ
ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದರು. ಕುಲಾಥುಪುಝಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಿಕ ಪ್ರದೀಪ್ 
ಬಂಧಿತ ಆರೋಪಿಯಾಗಿದ್ದಾನೆ.

ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆ ವಿಚಾರಣೆ ನಡೆಸುತ್ತಿದ್ದು, ಅಮಾನತು ವಿಳಂಬವಾಗಿದೆ.ಐಪಿಸಿ ಸೆಕ್ಷನ್ 376 ( ಅತ್ಯಾಚಾರಕ್ಕಾಗಿ ಶಿಕ್ಷೆ) ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 3 ರಂದು ಪ್ರದೀಪ್ ಬಾಡಿಗೆಯಲ್ಲಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ ಅಂತ್ಯದಲ್ಲಿ ಮಲ್ಲಪುರಂನಿಂದ ಕುಲಾಥುಪುಝಾಗೆ ಬಂದಿದ್ದ ಮಹಿಳೆ ಹೋಮ್ ಕ್ವಾರಂಟೈನ್ ನಲ್ಲಿದ್ದರು. ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಬಿಡುಗಡೆ ಪ್ರಮಾಣ ಪತ್ರ ಪಡೆಯಲು ಆ ಮಹಿಳೆಗೆ ಪ್ರದೀಪ್ ಫೋನ್ ನಂಬರ್ ಕೊಟ್ಟಿದ್ದಾನೆ.

ಗುರುವಾರ ಮಹಿಳೆಯನ್ನು ತನ್ನ ಮನೆಗೆ ಕರೆದು ಅತ್ಯಾಚಾರ ನಡೆಸಿದ್ದು, ಯಾರಿಗೂ  ಹೇಳದಂತೆ ಬೆದರಿಕೆ ಹಾಕಿದ್ದಾನೆ.ನಂತರ ಆಕೆ ಸ್ನೇಹಿತೆಯ ಮನೆಗೆ ಬಂದು,ವಿಚಾರ ತಿಳಿಸಿದ್ದಾಗ ದೂರು ನೀಡಲು ಆಕೆಯ ಸ್ನೇಹಿತೆ ಒತ್ತಾಯಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿ ಪ್ರದೀಪ್ ತಪ್ಪೊಪ್ಪಿಕೊಂಡಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲದ ಮುಂದೆ ಹಾಜರುಪಡಿಸಲಾಗುವುದು
ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com