ಪತ್ರಕರ್ತನ ಮೂಲಕ ಚೀನಾ ಪರ ಗೂಢಚರ್ಯೆ ಆರೋಪ: ಚೀನಾ ಮತ್ತು ನೇಪಾಳಿ ಪ್ರಜೆಗಳ ಬಂಧನ

ದೆಹಲಿ ಮೂಲದ ಪತ್ರಕರ್ತನ ಮೂಲಕ ಚೀನಾ ಪರ ಗೂಢಚರ್ಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ನೇಪಾಳಿ ಪ್ರಜೆಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Published: 19th September 2020 06:02 PM  |   Last Updated: 19th September 2020 06:02 PM   |  A+A-


Journalist Rajeev Sharma

ಪತ್ರಕರ್ತ ರಾಜೀವ್ ಶರ್ಮಾ ಮತ್ತು ಬಂಧಿತರು

Posted By : Srinivasamurthy VN
Source : PTI

ನವದೆಹಲಿ: ದೆಹಲಿ ಮೂಲದ ಪತ್ರಕರ್ತನ ಮೂಲಕ ಚೀನಾ ಪರ ಗೂಢಚರ್ಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ನೇಪಾಳಿ ಪ್ರಜೆಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ಹಿಂದೆ ಚೀನಾ ಪರ ಗೂಢಚರ್ಯೆ ನಡೆಸಿದ ಆರೋಪ ಮತ್ತು ರಕ್ಷಣಾ ಇಲಾಖೆಯ ಮಹತ್ವದ ದಾಖಲೆಗಳನ್ನು ಚೀನಾದೊಂದಿಗೆ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಸೆ.14ರಂದು ದೆಹಲಿ ಪೊಲೀಸರು ದೆಹಲಿ ಮೂಲದ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಬಂಧಿಸಿದ್ದರು. ರಾಜೀವ್ ಶರ್ಮಾ ಬಂಧನದ ಬೆನ್ನಲ್ಲೇ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಚೀನಾ ಮೂಲದ ಮಹಿಳೆ ಮತ್ತು ನೇಪಾಳದ ನಾಗರಿಕನನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, 'ನಕಲಿ ಕಂಪನಿಗಳ ಅಕೌಂಟ್‌ನಿಂದ ಈ ಪತ್ರಕರ್ತನಿಗೆ ಚೀನಾ ಮತ್ತು ನೇಪಾಳದ ಬಂಧಿತ ನಾಗರಿಕರು ದೊಡ್ಡಮೊತ್ತದ ಹಣ ಪಾವತಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಫೋನ್, ಲ್ಯಾಪ್‌ಟಾಪ್ ಮತ್ತು ಇತರ ಸೂಕ್ಷ್ಮ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಇನ್ನು ಬಂಧಿತ ಪತ್ರಕರ್ತ ರಾಜೀವ್ ಶರ್ಮಾ, ದಿ ಟ್ರಿಬ್ಯೂನ್, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ, ಫ್ರೀ ಪ್ರೆಸ್ ಜರ್ನಲ್, ಸಕಾಲ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದರು.  ದೆಹಲಿಯ ಪಿತಾಂಪುರ ಪ್ರದೇಶದ ನಿವಾಸಿ ಶರ್ಮಾ, ಕಳೆದ ಎರಡು ದಶಕಗಳಿಂದ ವಿದೇಶಾಂಗ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದರು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಅವರು ಹೊಂದಿದ್ದರು ಎಂದು ದೆಹಲಿ ಪೊಲೀಸ್‌ ವಕ್ತಾರರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp