ಚತ್ತೀಸ್ ಗಢ: ಕೋವಿಡ್-19 ನಿಯಂತ್ರಣ, ಕಮಾಂಡ್ ಕೇಂದ್ರ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!
ಚತ್ತೀಸ್ ಗಢ: ಕೋವಿಡ್-19 ನಿಯಂತ್ರಣ, ಕಮಾಂಡ್ ಕೇಂದ್ರ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!

ಚತ್ತೀಸ್ ಗಢ: ಕೋವಿಡ್ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರದ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!

ಚತ್ತೀಸ್ ಗಢದ ಕೋವಿಡ್-19 ನಿಯಂತ್ರಣ ಹಾಗೂ ಕಮಾಂಡ್ ಕೇಂದ್ರ, ಹಿರಿಯ ವೈದ್ಯ  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 

ರಾಯ್ ಪುರ: ಚತ್ತೀಸ್ ಗಢದ ಕೋವಿಡ್-19 ನಿಯಂತ್ರಣ ಹಾಗೂ ಕಮಾಂಡ್ ಕೇಂದ್ರ, ಹಿರಿಯ ವೈದ್ಯ  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಡಾ. ಸುಭಾಷ್ ಪಾಂಡೆ (65) ಮೃತ ವೈದ್ಯರಾಗಿದ್ದು, ಈಗಾಗಲೇ ಕೊರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು. ಅವರ ಸಹೋದ್ಯೋಗಿಗಳು ನೀಡಿರುವ ಮಾಹಿತಿಯ ಪ್ರಕಾರ ಡಾ. ಸುಭಾಷ್ ಪಾಂಡೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಪಾಂಡೆ, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರದ ವಕ್ತಾರರ ಜವಾಬ್ದಾರಿಯನ್ನೂ ನೀಡಲಾಗಿತ್ತು. 

ಜ್ವರ ಹಾಗೂ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಪಾಂಡೆ ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಸಂಜೆ ಅವರ ಸ್ಥಿತಿ ಹದಗೆಟ್ಟ ಪರಿಣಾಮ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com