ಕಾನ್ಪುರ ಮೋದಿ ರ‍್ಯಾಲಿ ವೇಳೆ ಹಿಂಸಾಚಾರಕ್ಕೆ ಸಂಚು: ಐವರು ಸಮಾಜವಾಧಿ ಕಾರ್ಯಕರ್ತರ ಬಂಧನ

ಪ್ರಧಾನಿ ನರೇಂದ್ರ ಮೋದಿಯವರ ಕಾನ್ಪುರ ರ‌್ಯಾಲಿಯಲ್ಲಿ ಹಿಂಸಾಚಾರದ ದೊಡ್ಡ ಸಂಚೊಂದು ಬಯಲಾಗಿದೆ. ಪಿಎಂ ಮೋದಿ ರ್ಯಾಲಿ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ವಾಹನ ಧ್ವಂಸಗೊಳಿಸಿದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಕ್ರಮ ಕೈಗೊಂಡಿದ್ದಾರೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಕಾನ್ಪುರ್: ಪ್ರಧಾನಿ ನರೇಂದ್ರ ಮೋದಿಯವರ ಕಾನ್ಪುರ ರ‌್ಯಾಲಿಯಲ್ಲಿ ಹಿಂಸಾಚಾರದ ದೊಡ್ಡ ಸಂಚೊಂದು ಬಯಲಾಗಿದೆ.  ಪಿಎಂ ಮೋದಿ ರ್ಯಾಲಿ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ವಾಹನ ಧ್ವಂಸಗೊಳಿಸಿದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಕ್ರಮ ಕೈಗೊಂಡಿದ್ದಾರೆ.

ಪ್ರಧಾನಿ ಮೋದಿಯವರ ಕಾನ್ಪುರ ಭೇಟಿಯ ವೇಳೆ ನಡೆದ ವಿಧ್ವಂಸಕ ಕೃತ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ನೌಬಸ್ತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದುವರೆಗೆ ಸುಕಾಂತ್ ಶರ್ಮಾ, ಸಚಿನ್ ಕೇಸರ್ವಾನಿ, ಅಭಿಷೇಕ್ ರಾವತ್ ಮತ್ತು ನಿಕೇಶ್ ಕುಮಾರ್ ಎಂಬ ನಾಲ್ಕು ಎಸ್ಪಿ ನಾಯಕರನ್ನು ಬಂಧಿಸಿದ್ದಾರೆ. ಇದನ್ನು ಸ್ವತಃ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಖಚಿತಪಡಿಸಿ,ಪ್ರಧಾನಿ ಮೋದಿ ಕಾನ್ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿನ ವಿಧ್ವಂಸಕ ಕೃತ್ಯ ಮತ್ತು ಹಲ್ಲೆ ಪ್ರಕರಣದ ಸಂಬಂಧ ನೌಬಸ್ತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಐವರು ಎಸ್ಪಿ ನಾಯಕರನ್ನು ಬಂಧಿಸಿರುವುದಾಗಿ ಸ್ಪಷ್ಟಪಡಿಸಿದರು.

ಪಿಎಂ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿ ಎಸ್‌ಪಿ ನಾಯಕರಿಂದ ಕಾರಿನ ಧ್ವಂಸ, ಬೆಂಕಿ ಹಚ್ಚಿ ಅದರ ವೀಡಿಯೊವನ್ನು ಸಹ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದುವರೆಗೆ ನಾಲ್ವರು ಎಸ್ಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಖಚಿತಪಡಿಸಿ,ಕೃತ್ಯಕ್ಕೆ ಬಳಿಸಿದ್ದ ಕಾರನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾದ ಎಂಟು ಜನರನ್ನು ಗುರುತಿಸಿದ್ದೇವೆ. ಉಳಿದ ನಾಲ್ವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ವಿಧ್ವಂಸಕ ಕೃತ್ಯ ನಡೆದಿರುವ ವಾಹನ ಅಂಕುರ್ ಪಟೇಲ್ ಎಂಬ ವ್ಯಕ್ತಿಗೆ ಸೇರಿದ್ದು, ಅವರು 2019 ರಿಂದ 2020 ರವರೆಗೆ ಸಮಾಜವಾದಿ ಪಕ್ಷದಲ್ಲಿ ಹಿಂದುಳಿದ ವರ್ಗಗಳ ಸೆಲ್ ಕಾರ್ಯದರ್ಶಿಯಾಗಿದ್ದಾರೆ. ಸದ್ಯ ಎಲ್ಲ ಕೋನಗಳಿಂದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಇದೇ ವೇಳೆ ನೌಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷವೊಂದರ ಕೆಲವರು ಪ್ರತಿಭಟನೆಯ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಅರುಣ್ ತಿಳಿಸಿದ್ದಾರೆ. ಕಾರು ಹಾಗೂ ಇತರೆ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ಇದು ಯಾವ ರೀತಿಯಿಂದಲೂ ಅಕ್ಷಮ್ಯವಲ್ಲ. ರಾಜಕೀಯ ಪ್ರದರ್ಶನದ ಹೆಸರಿನಲ್ಲಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ಈ ಎಲ್ಲ ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಚುನಾವಣಾ ವಾತಾವರಣ ನಿರ್ಮಾಣವಾಗುತ್ತಿದ್ದು, ಎಲ್ಲರೂ ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿಯ ರಾಜಕೀಯ ಮಾಡುತ್ತಿರುವವರಿಗೆ ಜಾಗವಿಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಕಾನ್ಪುರ ರ್ಯಾಲಿಯಲ್ಲಿ ಗಲಭೆ ಸೃಷ್ಟಿಸಲು ಹೆಣೆದಿದ್ದ ದೊಡ್ಡ ಪಿತೂರಿಯನ್ನು ಯುಪಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿಡಿಯೋ ದೃಶ್ಯಗಳ ಆಧಾರದ ಮೇಲೆ ಬಹಿರಂಗಪಡಿಸಿದ್ದಾರೆ. ಕಾನ್ಪುರದ ನೌಬಸ್ತಾದಲ್ಲಿ ಪಿಎಂ ನರೇಂದ್ರ ಮೋದಿಯವರ ರ‌್ಯಾಲಿಗೆ ಸ್ವಲ್ಪ ಮೊದಲು, ಸಮಾಜವಾದಿ ಪಕ್ಷದ ನಾಯಕ ಸ್ವತಃ ಪ್ರಧಾನಿ ಮೋದಿ ಪೋಸ್ಟರ್ ಅನ್ನು ಹಾಕುವ ಮೂಲಕ ಅವರ ಸ್ವಂತ ವಾಹನವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇವರೊಂದಿಗೆ ಇತರ ಏಳು ಎಸ್ಪಿ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ರ್ಯಾಲಿಗೂ ಮುನ್ನ ಎಸ್‌ಪಿ ನಾಯಕರು ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚಿದ ವಿಡಿಯೋವನ್ನು ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವಿಡಿಯೋ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸುವ ಸಂಚು ನಡೆದಿದೆ. ರ್ಯಾಲಿಗೆ ಬಂದ ಜನರನ್ನು ಪ್ರಚೋದಿಸಿ ಹಿಂಸಾಚಾರ ಎಸಗಲು ಸಂಚು ರೂಪಿಸಲಾಗಿತ್ತು. ಆದರೆ ಪೊಲೀಸರ ಚುರುಕಿನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com