ಕೋವಿಡ್ ಸೋಂಕು ಉಲ್ಬಣ: 6 ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು 2ನೇ ಅಲೆ ಇಳಿಕೆಯಾಗುತ್ತಿದ್ದರು, ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕು ನಿಯಮಿತವಾಗಿ ಉಲ್ಪಣವಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದೆ.
ಕೊರೋನಾ ವೈರಸ್
ಕೊರೋನಾ ವೈರಸ್
Updated on: 

ನವದೆಹಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು 2ನೇ ಅಲೆ ಇಳಿಕೆಯಾಗುತ್ತಿದ್ದರು, ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕು ನಿಯಮಿತವಾಗಿ ಉಲ್ಪಣವಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದೆ.

ಹೌದು..ಕೋವಿಡ್-19 ನಿಯಂತ್ರಣ ಮತ್ತು ಧಾರಕ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ತಂಡಗಳನ್ನು 6 ರಾಜ್ಯಗಳಿಗೆ ರವಾನೆ ಮಾಡಿದ್ದು, ಸೋಂಕು ಉಲ್ಪಣವಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್‌ಗಢ, ಮತ್ತು ಮಣಿಪುರಕ್ಕೆ ಈ ವಿಶೇಷ ತಂಡಗಳನ್ನು ಕಳುಹಿಸಲಾಗುತ್ತಿದೆ.

ದೇಶದಲ್ಲಿ ಅತೀ ಹೊಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಅಗ್ರ ಮೂರು ಸ್ಥಾನದಲ್ಲಿದ್ದು, ಈ ಪೈಕಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕು ಪ್ರಮಾಣ  ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಲಾಗಿದ್ದು, ಈ ತಂಡಗಳು ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸ್ಸು ಮಾಡಲಿದೆ.

ಇನ್ನು ಭಾರತದಲ್ಲಿ ಇಂದು 46,617 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 3,04,58,251 ಕ್ಕೆ ತಲುಪಿದೆ, ಆದರೆ ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ 97 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅಂತೆಯೇ ನಿನ್ನೆ 853 ಮಂದಿ  ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 4,00,312 ಕ್ಕೆ ಏರಿಕೆಯಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com