ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಅಸ್ಥಿರ, ವೆಂಟಿಲೇಟರ್ ಅಳವಡಿಕೆ

ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಅಸ್ಥಿರಗೊಂಡಿದ್ದು, ನಾನ್ ಇನ್ವಾಸೀವ್ ವೆಂಟಿಲೇಟರ್ ನ್ನು ಅಳವಡಿಸಲಾಗಿದೆ.
ಕಲ್ಯಾಣ್ ಸಿಂಗ್
ಕಲ್ಯಾಣ್ ಸಿಂಗ್
Updated on

ಲಖನೌ: ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಅಸ್ಥಿರಗೊಂಡಿದ್ದು, ನಾನ್ ಇನ್ವಾಸೀವ್ ವೆಂಟಿಲೇಟರ್ ನ್ನು ಅಳವಡಿಸಲಾಗಿದೆ.

ಸಂಜಯ್ ಗಾಂಧಿ ವೈದ್ಯಕೀಯ ಸ್ನಾತಕೋತ್ತರ ಸಂಸ್ಥೆ (ಎಸ್ ಜಿಪಿಜಿಐಎಂಎಸ್) ನಲ್ಲಿ ಕಲ್ಯಾಣ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಗ್ ಅವರ ಆರೋಗ್ಯದ ಮೇಲೆ ತಜ್ಞ ವೈದ್ಯರ ತಂಡ ನಿರಂತರವಾಗಿ ಗಮನ ಹರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. 

"ಕಲ್ಯಾಣ್ ಸಿಂಗ್ ಅವರ ಆರೋಗ್ಯ ಅಸ್ಥಿರವಾಗಿದೆ. ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಆಸ್ಪತ್ರೆ ಬುಲೆಟಿನ್ ನ ಮೂಲಕ ತಿಳಿಸಿದೆ. ಜುಲೈ 4 ರಂದು ಸೋಂಕು ಹಾಗೂ ಪ್ರಜ್ಞೆ ತಪ್ಪಿದ್ದರಿಂದ ಕಲ್ಯಾಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com