ದಲೈಲಾಮಾ
ದಲೈಲಾಮಾ

ತೈವಾನ್-ಚೀನಾ ಬಿಕ್ಕಟ್ಟು ಹಿನ್ನಲೆ: ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈಲಾಮಾ

ತೈವಾನ್ ಮತ್ತು ಚೀನಾ ದೇಶಗಳ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ಹಿನ್ನಲೆಯಲ್ಲಿ ಉಭಯ ದೇಶಗಳ ಸಂಬಂಧ ಸೂಕ್ಷ್ಮವಾಗಿದೆ. ಹೀಗಾಗಿ ತಾವು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ಧ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.

ನವದೆಹಲಿ: ತೈವಾನ್ ಮತ್ತು ಚೀನಾ ದೇಶಗಳ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ಹಿನ್ನಲೆಯಲ್ಲಿ ಉಭಯ ದೇಶಗಳ ಸಂಬಂಧ ಸೂಕ್ಷ್ಮವಾಗಿದೆ. ಹೀಗಾಗಿ ತಾವು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ಧ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.

ಟೋಕಿಯೊ ವಿದೇಶಿ ವರದಿಗಾರರ ಕ್ಲಬ್ ಆನ್‌ಲೈನ್‌ನ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, 'ಧಾರ್ಮಿಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿರುವ ಭಾರತದಲ್ಲಿಯೇ ಪ್ರಶಾಂತವಾಗಿ ಇರಲು ಬಯಸುವುದಾಗಿ ಬೌದ್ಧರ ಆಧ್ಯಾತ್ಮಿಕ ಗುರು ದಲೈಲಾಮಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಚೀನಾದ ನಾಯಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು ಆ ದೇಶದ ಕಮ್ಯುನಿಸ್ಟ್ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಹಾನಿಕಾರಕವಾಗಿದೆ' ಎಂದು ಅವರು ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಹಲವು ಪ್ರಶ್ನೆಗಳಿಗೆ ದಲೈಲಾಮಾ ಉತ್ತರಿಸಿದರು. ಟಿಬೆಟ್‌ನಲ್ಲಿ ಚೀನಾ ಆಡಳಿತದ ವಿರುದ್ಧ ಬಂಡಾಯ ವಿಫಲವಾದ ಹಿನ್ನೆಲೆಯಲ್ಲಿ ಅವರು 1959 ರಿಂದ ಭಾರತದಲ್ಲಿದ್ದಾರೆ. "ಸಾಮಾನ್ಯ ಬೌದ್ಧ ಸನ್ಯಾಸಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ಸ್ಥಳೀಯ, ರಾಜಕೀಯ ಸಂಕೀರ್ಣತೆಗಳ ಭಾಗವಾಗಲು ಇಷ್ಟವಿಲ್ಲ. ಚೀನಾದಲ್ಲಿ ವಿವಿಧ ಜನಾಂಗೀಯ ಗುಂಪುಗಳಿದ್ದರೂ... ಹಾನ್ ಸಮುದಾಯ ಹೆಚ್ಚು ಪ್ರಾಬಲ್ಯ, ನಿಯಂತ್ರಣಹೊಂದಿದೆ ಇದು ಸತ್ಯ ಎಂದು ಸ್ಪಷ್ಟಪಡಿಸಿದರು.

X

Advertisement

X
Kannada Prabha
www.kannadaprabha.com