ದೆಹಲಿ ವಾಯುಮಾಲಿನ್ಯ: ಸರ್ಕಾರಿ ನೌಕರರ 'ವರ್ಕ್ ಫ್ರಂ ಹೋಂ' ಗೆ ಕೇಂದ್ರ ವಿರೋಧ, ಕಾರ್‌ಪೂಲಿಂಗ್'ಗೆ ಸಲಹೆ

ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲು ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಇದರ ಬದಲಿಗೆ ಕಾರ್ಪೂಲಿಂಗ್ ಅನುಸರಿಸಲು ಸಿಬ್ಬಂದಿಗಳಿಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲು ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಇದರ ಬದಲಿಗೆ ಕಾರ್ಪೂಲಿಂಗ್ ಅನುಸರಿಸಲು ಸಿಬ್ಬಂದಿಗಳಿಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

ದೆಹಲಿ ಹಾಗೂ ನೆರೆಹೊರೆಯ ನಗರಗಳಲ್ಲಿನ ವಾಯು ಮಾಲಿನ್ಯದ ಕುರಿತು ವಿಚಾರಣೆಗೆ ಮುಂಚಿತವಾಗಿ ಸುಪ್ರೀಂಕೋರ್ಟ್'ಗೆ ಕೇಂದ್ರ ಸರ್ಕಾರ ಅವಿಡವಿಟ್ ಸಲ್ಲಿಸಿದೆ.

ಅಫಿಡವಿಟ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಸರ್ಕಾರಿ ಕಾರ್ಯಗಳ ಮೇಲೆ ಗಣನೀಯವಾಗಿ ದೀರ್ಘಾವಧಿಯವರೆಗೆ ಪರಿಣಾಮ ಬೀರಿವೆ. ಇದು ಇಡೀ ದೇಶದ ಮೇಲೆ ಪರಿಣಾಮ ಉಂಟು ಮಾಡಿತು. ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನ ಹಾಗೂ ಪರಿಣಾಮಕಾರಿಯಾಗುವುದಿಲ್ಲ. ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವ ಬದಲು, ಅವರು ಪ್ರಯಾಣಕ್ಕೆ ಬಳಲುವ ವಾಹನಗಳ ಸಂಖ್ಯೆ ಮಾಡಿ, ಕಾರ್ಪೂಲಿಂಗ್ ಅನುಸರಿಸುವುದು ಉತ್ತಮವಾಗಿರುತ್ತದೆ ಎಂದು ಹೇಳಿದೆ.

ದೆಹಲಿ-ಎನ್'ಸಿಆರ್'ನ ವಾಯು ಮಾಲಿನ್ಯ ನಿರ್ವಹಣೆಯ ಆಯುಕ್ತರಿಗೆ ಅಗತ್ಯವಸ್ತುಗಳ ಸಾಗಿಸುವ ಲಾರಿಗಳ ಹೊರತುಪಡಿಸಿ, ಭಾರೀ ಗಾತ್ರದ ಟ್ರಕ್ ಗಳ, ಧರ್ಮಲ್ ಪ್ಲಾಂಟ್, ನಿರ್ಮಾಣ ಕಾರ್ಯಗಳನ್ನು ನವೆಂಬರ್ 21ರವರೆಗೂ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

ಈ ನಡುವೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಲಹೆಗಳನ್ನು ನೀಡಿದ್ದು, ಸಂಚಾರಕ್ಕೆ ವಾಹನಗಳನ್ನು ಕಡಿಮೆ ಬಳಕೆ ಮಾಡುವಂತೆ ಹಾಗೂ ಇತರೆ ಸಿಬ್ಬಂದಿಗಳೊಂದಿಗೆ ಹಂಚಿಕೊಳ್ಳುವಂತೆ ಸಲಹೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಈ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಪಂಜಾಬ್, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳೊಂದಿಗೆ ನವೆಂಬರ್ 16 ರಂದು "ತುರ್ತು ಸಭೆ" ನಡೆಸುವಂತೆ ಹಾಗೂ ಈ ವೇಳೆ ದೆಹಲಿ-ಎನ್‌ಸಿಆರ್‌ನಲ್ಲಿನ ವಾಯುಮಾಲಿನ್ಯವನ್ನು ತಡೆಯಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು. ಅಲ್ಲದೆ, ಉದ್ಯೋಗಿಗಳಿಗೆ ಕನಿಷ್ಠ ಒಂದು ವಾರದವರೆಗೆ ಮನೆಯಿಂದ ಕೆಲಸ ಮಾಡಲು ಪರಿಗಣಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com