ಸಿಎಂ ನವೀನ್ ಪಟ್ನಾಯಕ್ ಬೆಂಗಾವಲು ವಾಹನದ ಮೇಲೆ ಮೊಟ್ಟೆ ಎಸೆತ, ವಿಡಿಯೋ ವೈರಲ್

ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿರುವಾಗ ಪುರಿಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು.
ನವೀನ್ ಪಟ್ನಾಯಕ್
ನವೀನ್ ಪಟ್ನಾಯಕ್
Updated on

ಭುವನೇಶ್ವರ: ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿರುವಾಗ ಪುರಿಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು.

ಪುರಿಯ ಆಸ್ಪತ್ರೆ ಛಕ್ ಬಳಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದರು. ಅಷ್ಟೇಅಲ್ಲದೇ ಕಪ್ಪು ಬಾವುಟವನ್ನು ಬೀಸಿದರು ಎಂದು ಮೂಲಗಳು ತಿಳಿಸಿವೆ. ಕಾರ್ಯಕರ್ತರು "ನವೀನ್ ಪಟ್ನಾಯಕ್ ಡೌನ್ ಡೌನ್" ಎಂದು ಘೋಷಣೆ ಕೂಗಿದರು ಮತ್ತು ಅವರ ಭೇಟಿಯನ್ನು ವಿರೋಧಿಸಿದರು.

ಮಮಿತಾ ಮೆಹರ್ ಹತ್ಯೆಯಲ್ಲಿ ಗೃಹ ಖಾತೆ ರಾಜ್ಯ ಸಚಿವೆ ದಿಬ್ಯಾ ಶಂಕರ್ ಮಿಶ್ರಾ ಅವರ ಕೈವಾಡವಿದೆ ಎಂಬ ಆರೋಪದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರು ಮೊಟ್ಟೆಯಿಂದ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಗನ್ನಾಥ ದೇಗುಲದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಹಾಯಜ್ಞದ ಕೊನೆಯ ದಿನದಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮ್ಮುಖದಲ್ಲಿ ಶ್ರೋತ್ರಿಯ ಬ್ರಾಹ್ಮಣ ಸಮುದಾಯದ ಪುರೋಹಿತರು ಪಠಣ ಮಾಡುವ ಭಜನೆಗಳ ಮಧ್ಯೆ ಪೂರಿ ಗಜಪತಿ ದಿಬ್ಯಸಿಂಗ ದೇಬ್ ಅವರು ಬುಧವಾರ ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ಮಾಡಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com