ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಶ್ವಾಸಕೋಶ ಕಸಿ: ವೈದ್ಯರ ನಿಗಾದಲ್ಲಿ ರೋಗಿ

ಗುಜರಾತಿನ ಖಾಸಗಿ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್ ನಿಂದ ರೋಗಿಯೊಬ್ಬರು ಮೃತಪಟ್ಟಿದ್ದರು. ಅವರ ಶ್ವಾಸಕೋಶವನ್ನು ವಿಮಾನದ ಮೂಲಕ ಕೋಲ್ಕತಾಗೆ ತರಿಸಿಕೊಂಡು 60 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ: ಪ.ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ 60 ವರ್ಷದ ರೋಗಿ ದಾಖಲಾಗಿದ್ದರು. 

ರೋಗಿಗೆ 11- 12 ಗಂಟೆಗಳ ಕಾಲ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಈ ಹಿಂದೆ ರೋಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ನಂತರ ಗುಣಮುಖರಾಗಿದ್ದರು. ಈ ಸಂದರ್ಭದಲ್ಲಿ ಅವರಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಂಡುಬಂದಿದ್ದವು. 

ಗುಜರಾತಿನ ಖಾಸಗಿ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್ ನಿಂದ ರೋಗಿಯೊಬ್ಬರು ಮೃತಪಟ್ಟಿದ್ದರು. ಅವರ ಶ್ವಾಸಕೋಶವನ್ನು ವಿಮಾನದ ಮೂಲಕ ಕೋಲ್ಕತಾಗೆ ತರಿಸಿಕೊಂಡು 60 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ರೋಗಿಯ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ.

ಶ್ವಾಸಕೋಶ ಕಸಿಯನ್ನು ಸಾಮಾನ್ಯವಾಗಿ ವೈದ್ಯರು ಮಾಡುವುದು ಅಪರೂಪ. ಔಶಧ ಮತ್ತಿತರ ವಿಧಾನಗಳನ್ನೆಲ್ಲಾ ಪ್ರಯತ್ನಿಸಿ ಫಲ ನೀಡದ ಸಂದರ್ಭದಲ್ಲಿ ಮಾತ್ರ ವೈದ್ಯರು ಶ್ವಾಸಕೋಶ ಕಸಿಗೆ ಮುಂದಾಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com