ಐತಿಹಾಸಿಕ ನೀಲ್ ಗಿರಿ ಮೌಂಟೇನ್ ರೈಲ್ವೇ ವಿಶೇಷ ರೈಲ್ವೇ ಟಿಕೆಟ್ ಗೆ ದುಬಾರಿ ಶುಲ್ಕ: ಸಾರ್ವಜನಿಕರ ಆಕ್ರೋಶ

ನೀಲ್ ಗಿರಿ ರೈಲ್ವೇ ನಿಗದಿ ಪಡಿಸಿರುವ ಟಿಕೆಟ್ ಶುಲ್ಕದಲ್ಲಿ ಕೇವಲ ಶ್ರೀಮಂತರು, ಉದ್ಯಮಿಗಳು ಸೆಲಬ್ರಿಟಿಗಳು ಪ್ರಯಾಣಿಸಬಹುದಷ್ಟೇ. ಜನಸಾಮಾನ್ಯರು ರೈಲು ಹತ್ತಬೇಕೆನ್ನುವ ಉದ್ದೇಶ ಅಧಿಕಾರಿಗಳಿಗೆ ಇದ್ದಂತಿಲ್ಲ ಎಂದು ಜನರು ಕಿಡಿ ಕಾರಿದ್ದಾರೆ.
ನೀಲ್ ಗಿರಿ ಮೌಂಟೇನ್ ರೈಲು
ನೀಲ್ ಗಿರಿ ಮೌಂಟೇನ್ ರೈಲು

ಕೂನೂರು: ಜಗತ್ಪ್ರಸಿದ್ಧ ಐತಿಹಾಸಿಕ ನೀಲ್ ಗಿರಿ ಮೌಂಟೇನ್ ರೈಲ್ವೇ ಗಾಂಧಿ ಜಯಂತಿ ದಿನದಂದು ತನ್ನ ರೈಲಿನಲ್ಲಿ ಪ್ರಯಾಣಿಸುವವರಿಗೆ ಅತಿ ದುಬಾರಿ ಮೊತ್ತದ ಶುಲ್ಕ ವಿಧಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ. 

ಗಾಂಧಿ ಜಯಂತಿ ದಿನದಂದು ನೀಲ್ ಗಿರಿ ಮೌಂಟೇನ್ ರೈಲ್ವೇ ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. 75ನೇ ಗಾಂಧಿ ಜಯಂತಿ ವರ್ಷಾಚರಣೆ ಅಂಗವಾಗಿ ವಿಶೇಷ ರೈಲಿನ ಏರ್ಪಾಡು ನಡೆದಿತ್ತು.

ಮೆಟ್ಟು ಪಾಳ್ಯಂ ನಿಂದ ಕೂನೂರು ತನಕ ಫರ್ಸ್ಟ್ ಕ್ಲಾಸ್ ಟಿಕೆಟ್ ಗೆ ೧,೧೦೦ ರೂ., ಸೆಕೆಂಡ್ ಕ್ಲಾಸ್ ಗೆ ೮೦೦ ರೂ. ನಿಗದಿ ಪಡಿಸಿತ್ತು. ಮೆಟ್ಟುಪಾಳ್ಯಂನಿಂದ ಊಟಿ ಮಾರ್ಗದಲ್ಲಿ ಮೊದಲ ಕ್ಲಾಸ್ಗೆ ೧,೪೫೦ ರೂ., ಸೆಕೆಂಡ್ ಕ್ಲಾಸ್ ಗೆ ೧,೦೫೦ ರೂ.

ಇದನ್ನು ಹೊರತು ಪಡಿಸಿ ಜಿ ಎಸ್ ಟಿ ಎಕ್ಸ್ಟ್ರಾ. ಮೆಟ್ಟುಪಾಳ್ಯಂನಿಂದ ಕೂನೂರು ಬಸ್ ನಲ್ಲಿ ರೂ.೩೬ ಶುಲ್ಕವಿದೆ. ಹೀಗಿರುವಾಗ ರೈಲ್ವೇ ಅಷ್ಟು ದೊಡ್ಡ ಮೊತ್ತ ನಿಗದಿ ಪಡಿಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. 

ನೀಲ್ ಗಿರಿ ರೈಲ್ವೇ ನಿಗದಿ ಪಡಿಸಿರುವ ಟಿಕೆಟ್ ಶುಲ್ಕದಲ್ಲಿ ಕೇವಲ ಶ್ರೀಮಂತರು, ಉದ್ಯಮಿಗಳು ಸೆಲಬ್ರಿಟಿಗಳು ಪ್ರಯಾಣಿಸಬಹುದಷ್ಟೇ. ಜನಸಾಮಾನ್ಯರು ರೈಲು ಹತ್ತಬೇಕೆನ್ನುವ ಉದ್ದೇಶ ಅಧಿಕಾರಿಗಳಿಗೆ ಇದ್ದಂತಿಲ್ಲ ಎಂದು ಜನರು ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com