ಪೆರು ನಲ್ಲಿ ಹೆಲಿಕಾಪ್ಟರ್ ಪತನ: ಐವರು ಸೈನಿಕರು ಸಾವು

ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ (ಸಿಸಿಎಫ್‌ಎಫ್‌ಎಎ) ತಿಳಿಸಿದೆ.

Published: 18th April 2021 10:39 AM  |   Last Updated: 18th April 2021 10:39 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : UNI

ಲಿಮಾ: ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ (ಸಿಸಿಎಫ್‌ಎಫ್‌ಎಎ) ತಿಳಿಸಿದೆ.

ಶನಿವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಒಟ್ಟು 12 ಸೈನಿಕರನ್ನು ಹೊತ್ತ ಹೆಲಿಕಾಪ್ಟರ್ ಅಕ್ರಮ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಜಾಗೃತ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಪ್ರಕಟಣೆಯನ್ನು ಸಿಸಿಎಫ್‌ಎಫ್‌ಎ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ.

‘ಸಶಸ್ತ್ರ ಪಡೆಗಳ ಧೈರ್ಯಶಾಲಿ ಸಿಬ್ಬಂದಿ ಸಾವಿಗೆ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್‍ ವಿಷಾಧಿಸುತ್ತಿದೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.’ ಎಂದು ಪ್ರಕಟಣೆ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp