ಆಸ್ಪತ್ರೆಯಿಂದ 1,710 ಡೋಸ್ ಗಳಷ್ಟು ಕೋವಿಡ್-19 ಲಸಿಕೆ ಕಳವು 

ಹರ್ಯಾಣದಲ್ಲಿ ನೆನ್ನೆ ಆಕ್ಸಿಜನ್ ಟ್ಯಾಂಕರ್ ಕಳ್ಳತನವಾದ ಬೆನ್ನಲ್ಲೇ ಇಂದು (ಏ.22) ರಂದು ಕೋವಿಡ್-19 ಲಸಿಕೆಯ ಕಳುವು ವರದಿಯಾಗಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಹರ್ಯಾಣ: ಹರ್ಯಾಣದಲ್ಲಿ ನೆನ್ನೆ ಆಕ್ಸಿಜನ್ ಟ್ಯಾಂಕರ್ ಕಳ್ಳತನವಾದ ಬೆನ್ನಲ್ಲೇ ಇಂದು (ಏ.22) ರಂದು ಕೋವಿಡ್-19 ಲಸಿಕೆಯ ಕಳುವು ವರದಿಯಾಗಿದೆ.

ಹರ್ಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಲ್ಲಿ 1,710 ಡೋಸ್ ಗಳಷ್ಟು ಕೋವಿಡ್-19 ಲಸಿಕೆಯನ್ನು ಕಳುವು ಮಾಡಲಾಗಿದೆ. 

1270 ಡೋಸ್ ಗಳಷ್ಟು ಕೋವಿಶೀಲ್ಡ್ ಹಾಗೂ 440 ಕೋವ್ಯಾಕ್ಸಿನ್ ಡೋಸ್ ಗಳನ್ನು ಕಳ್ಳತನ ಮಾಡಲಾಗಿದೆ. ಅಷ್ಟೇ ಅಲ್ಲದೇ ಪ್ರಮುಖವಾದ ಕೆಲವು ಕಡತಗಳೂ ಕಳುವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರದ ಉಸ್ತುವಾರಿ ದೂರು ನೀಡಿದ್ದು, ಪೊಲೀಸ್ ತನಿಖೆ ಪ್ರಾರಂಭವಾಗಿದೆ.

ಇದಕ್ಕೂ ಮುನ್ನ ಹರ್ಯಾಣದಲ್ಲಿ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಲಾಗಿತ್ತು, ಪಾಣಿಪತ್ ನಿಂದ ಫರೀದಾಬಾದ್ ಗೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹರ್ಯಾಣ ಸಚಿವ ಅನಿಲ್ ವಿಜ್, ದೆಹಲಿ ಸರ್ಕಾರ ಆಕ್ಸಿಜನ್ ಟ್ಯಾಂಕರ್ ಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com