ದಾರುಣ ಘಟನೆ: ಕೋವಿಡ್ ಸೋಂಕಿತ ಪತ್ನಿಯ ಕತ್ತು ಸೀಳಿದ ರೈಲ್ವೆ ಉದ್ಯೋಗಿ, ನಂತರ ತಾನೂ ಆತ್ಮಹತ್ಯೆಗೆ ಶರಣು!

ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ.

Published: 26th April 2021 03:04 PM  |   Last Updated: 26th April 2021 04:07 PM   |  A+A-


For representational purposes

ಸಂಗ್ರಹ ಚಿತ್ರ

Posted By : Vishwanath S
Source : The New Indian Express

ಪಾಟ್ನಾ: ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ. 

ಉದ್ಯೋಗಿ ಅತುಲ್ ಲಾಲ್, ಮೊದಲು ತಮ್ಮ ಪತ್ನಿ ತುಲಿಕಾ ಕುಮಾರಿಯವರ ಕತ್ತು ಸೀಳಿ ನಂತರ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು ಈ ಹೃದಯ ಕದಡುವ ಘಟನೆ ಚಿತ್ರಗುಪ್ತನಗರದಲ್ಲಿ ನಡೆದಿದೆ.

ಕೆಲ ಕುಟುಂಬ ಸಮಸ್ಯೆಗಳ ಬಗ್ಗೆ ಗಂಡ ಮತ್ತು ಹೆಂಡತಿ ಜಗಳವಾಡಿದ್ದರು. ಮಹಿಳೆಗೆ ಕೋವಿಡ್ ಸೋಂಕು ತಗುಲಿರುವುದರಿಂದ ತಮಗೂ ಬರಬಹುದು ಎಂಬ ಆತಂಕದಿಂದ ನೆರೆಹೊರೆಯವರು ಸಮಾಧಾನಪಡಿಸಲು ಪ್ರಯತ್ನಿಸಲಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಜಗಳದಿಂದ ಕೋಪಗೊಂಡಿದ್ದ ಅತುಲ್ ಲಾಲ್ ತನ್ನ ಹೆಂಡತಿಯ ಗಂಟಲನ್ನು ಬ್ಲೇಡ್‌ನಿಂದ ಸೀಳಿದ್ದಾನೆ. ಇದನ್ನು ಕಂಡ ಸುಮಾರು 6 ಮತ್ತು 9 ವರ್ಷ ವಯಸ್ಸಿನ ಮಕ್ಕಳು ಕೂಗಾಡಿದ್ದು ಇದರಿಂದ ಹೆದರಿದ ಅತುಲ್ ಲಾಲ್ ಐದನೇ ಮಹಡಿಯಿಂದ ಹಾರಿ  ಸಾವನ್ನಪ್ಪಿದರು. ದಂಪತಿಗಳು ಅರಾ ಜಿಲ್ಲೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp