ಓಮಿಕ್ರಾನ್ ಭೀತಿ: ಮುಂಬೈ ನಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ಜಾರಿ

ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವುದನ್ನು ತಡಗಟ್ಟಲು ಮುಂಬೈ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 
ಮುಂಬೈ (ಸಂಗ್ರಹ ಚಿತ್ರ)
ಮುಂಬೈ (ಸಂಗ್ರಹ ಚಿತ್ರ)

ನವದೆಹಲಿ: ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವುದನ್ನು ತಡಗಟ್ಟಲು ಮುಂಬೈ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಡಿ.11 ಹಾಗೂ 12 ರಂದು ರ್ಯಾಲಿಗಳು, ಮೋರ್ಚಾ ಮೆರವಣಿಗೆ, ವಾಹನ ಹಾಗೂ ವ್ಯಕ್ತಿಗಳು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ.

ಕಾನೂನು ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ಸೆಕ್ಷನ್ 188 ರ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಡಿ.10 ರಂದು ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕಿನ 7 ಹೊಸ ಪ್ರಕರಣಗಳು ವರದಿಯಾಗಿತ್ತು. 

7 ಮಂದಿಯ ಪೈಕಿ ನಾಲ್ವರು ರೋಗಲಕ್ಷಣ ರಹಿತರಾಗಿದ್ದು, ಮೂವರಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸ ಪ್ರಕರಣಗಳ ಪೈಕಿ ನಾಲ್ವರು ಪೂರ್ಣ ಪ್ರಮಾಣದ ಲಸಿಕೆ ತೆಗೆದುಕೊಂಡಿದ್ದರೆ, ಮತ್ತೋರ್ವರು ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ ಒಬ್ಬರು ಈ ವರೆಗೆ ಲಸಿಕೆಯನ್ನು ಪಡೆದಿಲ್ಲ. ಮಹಾರಾಷ್ಟ್ರದಲ್ಲಿ ಈ ವರೆಗೂ 17 ಓಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com