90 ನಿಮಿಷಗಳಲ್ಲಿ ಓಮಿಕ್ರಾನ್ ಪತ್ತೆ ಹಚ್ಚುವ ವಿಧಾನ: ದೆಹಲಿ ಐಐಟಿ ಸಂಶೋಧಕರ ಸಾಧನೆ

ಸದ್ಯ ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ವಿಧಾನವು ಓಮಿಕ್ರಾನ್ ಪತ್ತೆಗೆ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂಥದ್ದರಲ್ಲಿ ಮೂರು ದಿನಗಳನ್ನು ಕೇವಲ 90 ನಿಮಿಷಗಳಿಗೆ ಇಳಿಸಿದ ಖ್ಯಾತಿ ಭಾರತೀಯ ಸಂಶೋಧಕರದ್ದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಐಐಟಿ ದೆಹಲಿಯಲ್ಲಿನ ಸಂಶೋಧಕರು ಕೇವಲ 90 ನಿಮಿಷಗಳಲ್ಲಿ ಓಮಿಕ್ರಾನ್ ವೈರಾಣು ಸೋಂಕನ್ನು ಪತ್ತೆ ಹಚ್ಚುವ ವಿಧಾನವನ್ನು ಆವಿಷ್ಕರಿಸಿದ್ದಾರೆ.

ಸದ್ಯ ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ವಿಧಾನವು ಓಮಿಕ್ರಾನ್ ಪತ್ತೆಗೆ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂಥದ್ದರಲ್ಲಿ ಮೂರು ದಿನಗಳನ್ನು ಕೇವಲ 90 ನಿಮಿಷಗಳಿಗೆ ಇಳಿಸಿದ ಖ್ಯಾತಿ ಭಾರತೀಯ ಸಂಶೋಧಕರದ್ದು.

ಈ ನೂತನ RTPCR ಆಧಾರಿತ ಓಮಿಕ್ರಾನ್ ಪತ್ತೆ ವಿಧಾನದ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದು ಐಐಟಿ ಆಡಳಿತ ಮಂಡಳಿ ತಿಳಿಸಿದೆ. ಭಾರತದಲ್ಲಿ ಮೊದಲ ಓಮಿಕ್ರಾನ್ ವೈರಾಣು ಬೆಂಗಳೂರಿನಲ್ಲಿ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com