ತಿರುಚ್ಚಿ: ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಮಳೆಯಿಂದಾಗಿ ನಿರ್ಗತಿಕರು ವಸತಿ ಇಲ್ಲದೆ ನರಳುವಂತಾಗಿತ್ತು.
ಇದನ್ನೂ ಓದಿ: ಮಕ್ಕಳಿಗೆ ಝೈಕೋವ್-ಡಿ ಕೋವಿಡ್ ಲಸಿಕೆ: ಸರ್ಕಾರಕ್ಕೆ 1 ಕೋಟಿ ಡೋಸ್ ಪೂರೈಕೆ; ಬೆಲೆ 265 ರೂಪಾಯಿ
ಹಲವು ಮಂದಿ ನಿರ್ಗತಿಕರು ನಿರಾಶ್ರಿತ ಶಿಬಿರಗಳಲ್ಲಿ, ನಿರ್ಗತಿಕರಿಗಾಗಿ ಮೀಸಲಿರುವ ಕ್ಯಾಂಪುಗಳಲ್ಲಿ ಆಶ್ರಯ ಪಡೆದರು. ನಗರದಾದ್ಯಂತ ಹರಡಿಕೊಂಡಿದ್ದ ಅನೇಕ ನಿರ್ಗತಿಕರು ಒಂದೇ ಸೂರಿನಡಿ ಆಶ್ರಯ ಪಡೆಯುವಂತಾಯಿತು.
ಇದನ್ನೂ ಓದಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 116.50 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ: ಕೇಂದ್ರ ಸರ್ಕಾರ
ಇವರಲ್ಲಿ ಅನೇಕ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿರಲಿಲ್ಲವಾದ್ದರಿಂದ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು. ಇದೀಗ ತಿರುಚ್ಚಿಯಲ್ಲಿನ ನಿರ್ಗತಿಕ ಶಿಬಿರಗಳಲ್ಲಿನ ಮಂದಿಗೆ ಉಚಿತ ಕೊರೊನಾ ಲಸಿಕೆ ನೂಡುವ ಕಾರ್ಯಕ್ರಮವನ್ನು ನಗರಾಡಳಿತ ಹಮ್ಮಿಕೊಂಡಿದೆ.
ಇದನ್ನೂ ಓದಿ: WHO ಮನ್ನಣೆ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆಯ ಬಳಕೆಯ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
ನಗರಾಡಳಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ಗತಿಕರು, ಭಿಕ್ಷುಕರು ನಗರಪ್ರದೇಶದಾದ್ಯಂತ ತಿರುಗಾಡುವುದರಿಂದ ಅವರಲ್ಲಿ ಒಬ್ಬರಿಗೆ ಕೊರೊನಾ ತಗುಲಿದರೂ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚು ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಎರಡು ಬಾರಿ ಲಸಿಕೆ ನೀಡುವ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗಿ ಅವರು ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ಲಸಿಕೆಗಳನ್ನು ತಯಾರಿಸಲು ಭಾರತ ಸಿದ್ಧ: ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ