ನೇಪಾಳಕ್ಕೆ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಿರುವ ಚೀನಾ

ಕಳೆದ ತಿಂಗಳು ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪರಾಮರ್ಶೆ ನಡೆಸಲು ನೇಪಾಳ ಸರ್ಕಾರ ಪ್ರತ್ಯೇಕ ಸಮಿತಿಯನ್ನು ರಚಿಸಿತ್ತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಠ್ಮಂಡು: ನೇಪಾಳ ವಿದೇಶಾಂಗ ಸಚಿವ ನಾರಾಯಣ್ ಖಡ್ಕಾ ಅವರು ಇತ್ತೀಚಿಗಷ್ಟೆ ಚೀನಾ ವಿದೇಶಾಂಗ ಸಚಿವರೊಂದಿಗೆ ಫೋನ್ ಮಾತುಕತೆ ನಡೆಸಿದ್ದರು. ಈ ಸಂದರ್ಭ ಉಭಯ ದೇಶಗಳ ನಡುವಿನ ಬಾಂಧವ್ಯವೃದ್ಧಿ ಕುರಿತಾಗಿ ಇಬ್ಬರೂ ಮಾತುಕತೆ ನಡೆಸಿದ್ದರು.

ಈ ಮಾತುಕತೆ ನಂತರ ನೇಪಾಳಕ್ಕೆ ಹೆಚ್ಚುವರಿ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲು ಚೀನಾ ನಿರ್ಧರಿಸಿರುವುದಾಗಿ ಚೀನಾ ವಿದೇಶಾಂಗ ಸಚಿವರು ಘೋಷಿಸಿದ್ದಾರೆ. 

ಕಳೆದ ತಿಂಗಳು ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪರಾಮರ್ಶೆ ನಡೆಸಲು ನೇಪಾಳ ಸರ್ಕಾರ ಪ್ರತ್ಯೇಕ ಸಮಿತಿಯನ್ನು ರಚಿಸಿತ್ತು ಎನ್ನುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com