ಕೇರಳದಲ್ಲಿ ಇಂದು ಒಂದೇ ದಿನ 44 ಓಮಿಕ್ರಾನ್ ಪ್ರಕರಣ ಪತ್ತೆ, ಹೊಸ ರೂಪಾಂತಂರಿ ಸೋಂಕಿತರ ಸಂಖ್ಯೆ 107 ಏರಿಕೆ
ಕೇರಳದಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 44 ಹೊಸ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇವರ ನಾಡಿನಲ್ಲಿ ಪತ್ತೆಯಾದ ರೂಪಾಂತರಿ ಪ್ರಕರಣಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
Published: 31st December 2021 05:04 PM | Last Updated: 31st December 2021 05:04 PM | A+A A-

ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಕೇರಳದಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 44 ಹೊಸ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇವರ ನಾಡಿನಲ್ಲಿ ಪತ್ತೆಯಾದ ರೂಪಾಂತರಿ ಪ್ರಕರಣಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
ಹೊಸ ಓಮಿಕ್ರಾನ್ ಪ್ರಕರಣಗಳು ಎರ್ನಾಕುಲಂ(12), ಕೊಲ್ಲಂ(10), ತಿರುವನಂತಪುರಂ(8), ತ್ರಿಶೂರ್(4), ಕೊಟ್ಟಾಯಂ(2), ಪಾಲಕ್ಕಾಡ್(2), ಕಣ್ಣೂರು(2), ಮಲಪ್ಪುರಂ(2), ಅಲಪ್ಪುಳ(1) ಮತ್ತು ಇಡುಕ್ಕಿ(1)ಯಲ್ಲಿ ಪತ್ತೆಯಾಗಿವೆ.
ಇದನ್ನು ಓದಿ: ರಾಜಸ್ಥಾನ: ಓಮಿಕ್ರಾನ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿ ಸಾವು
ಇಂದು ಪತ್ತೆಯಾದ ಸೋಂಕಿತರಲ್ಲಿ 10 ಮಂದಿ ಹೆಚ್ಚಿನ ಅಪಾಯದ ದೇಶಗಳಿಂದ ಬದವರಾಗಿದ್ದು, 27 ಮಂದಿ ಕಡಿಮೆ ಅಪಾಯದ ದೇಶಗಳಿಂದ ಬಂದಿದ್ದಾರೆ.
ಇದುವರೆಗೆ, ಹೆಚ್ಚಿನ ಅಪಾಯದ ದೇಶಗಳಿಂದ ಬಂದ 41 ಜನರಿಗೆ ಮತ್ತು ಕಡಿಮೆ ಅಪಾಯದ ದೇಶಗಳಿಂದ 52 ಜನರಿಗೆ ಓಮಿಕ್ರಾನ್ ದೃಢಪಟ್ಟಿದೆ. ಯುಎಇಯಿಂದ ಹಿಂದಿರುಗಿದ 29 ಜನರಿಗೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನಿಂದ ಬಂದ 23 ಜನರಿಗೆ ಓಮಿಕ್ರಾನ್‌ಗೆ ಪಾಸಿಟಿವ್ ಬಂದಿದೆ.