ಮುಂಬೈ: ಪ್ರಹಾರ್ ಜನಶಕ್ತಿ ಪಕ್ಷದ ಕಚೇರಿ ಧ್ವಂಸ; ಕಾರ್ಯಕರ್ತನ ಮೇಲೆ ಹಲ್ಲೆ, ನಾಲ್ವರ ಬಂಧನ

ಮಾಲ್ವಾನಿಯಲ್ಲಿರುವ ಪ್ರಹಾರ್ ಜನಶಕ್ತಿ ಪಕ್ಷದ(ಪಿಜೆಪಿ) ಕಚೇರಿ ಧ್ವಂಸ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಾಲ್ವಾನಿಯಲ್ಲಿರುವ ಪ್ರಹಾರ್ ಜನಶಕ್ತಿ ಪಕ್ಷದ(ಪಿಜೆಪಿ) ಕಚೇರಿ ಧ್ವಂಸ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ದಾಳಿಯು ಹಳೆಯ ಪೈಪೋಟಿಯ ಪರಿಣಾಮವೇ ಹೊರತು ರಾಜಕೀಯ ಪ್ರೇರಿತವಲ್ಲ. ಕಚೇರಿ ಧ್ವಂಸ ಹಾಗೂ ಪಕ್ಷದ ಕಾರ್ಯಕರ್ತ ಇರ್ಫಾನ್ ಶೇಖ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಕಬೀರ್ ಮುಲ್ಲಾ, ಸಾದಿಕ್ ಶೇಖ್, ಫೈಸಲ್ ಖುರೇಷಿ ಮತ್ತು ಅಫ್ಜಲ್ ಖುರೇಷಿರನ್ನು ಬಂಧಿಸಿದ್ದಾರೆ. ಅಲ್ಲದೆ ತಲೆ ಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. 

ಮಾಲ್ವಾನಿಯಲ್ಲಿರುವ ಪಿಜೆಪಿಯ ಹೊಸ ಕಚೇರಿಯನ್ನು ಶೇಖ್ ಉದ್ಘಾಟಿಸಲಿದ್ದು, ಉದ್ಘಾಟನೆಗೆ ಸಚಿವ ಬಚು ಕಾಡುಗೆ ಆಹ್ವಾನವಿತ್ತು. ಆದರೆ, ಉದ್ಘಾಟನೆಗೆ ಮುನ್ನ ಆರೋಪಿಗಳು ಕಚೇರಿಗೆ ನುಗ್ಗಿ ಆವರಣವನ್ನು ಧ್ವಂಸಗೊಳಿಸಿ ಶೇಖ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಮತ್ತು ಐಪಿಸಿಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಈ ದಾಳಿಯು ಹಳೆಯ ಪೈಪೋಟಿಯ ಪರಿಣಾಮವಾಗಿದೆ. ಇದು ರಾಜಕೀಯ ವಿವಾದವಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com