ದೇಶದಲ್ಲಿ ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣ ವರದಿ 

ದೇಶದಲ್ಲಿ ಹಕ್ಕಿ ಜ್ವರದಿಂದ ಸಾವನ್ನಪ್ಪಿರುವ ಮೊದಲ ಪ್ರಕರಣ ದೆಹಲಿಯ ಏಮ್ಸ್ ನಲ್ಲಿ ವರದಿಯಾಗಿದೆ.
ಏಮ್ಸ್ (ಸಂಗ್ರಹ ಚಿತ್ರ)
ಏಮ್ಸ್ (ಸಂಗ್ರಹ ಚಿತ್ರ)

ನವದೆಹಲಿ: ದೇಶದಲ್ಲಿ ಹಕ್ಕಿ ಜ್ವರದಿಂದ ಸಾವನ್ನಪ್ಪಿರುವ ಮೊದಲ ಪ್ರಕರಣ ದೆಹಲಿಯ ಏಮ್ಸ್ ನಲ್ಲಿ ವರದಿಯಾಗಿದೆ.

ಈ ವರ್ಷದ ಮೊದಲ ಸಾವಿನ ಪ್ರಕರಣ ಇದಾಗಿದ್ದು, ಏಮ್ಸ್ ನ ಪೀಡಿಯಾಟ್ರಿಕ್ ವಿಭಾಗದಲ್ಲಿ H5N1 ಏವಿಯನ್ ಫ್ಲೂ ಗೆ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕ ಮೃತ ದುರ್ದೈವಿಯಾಗಿದ್ದಾರೆ. 

ನ್ಯುಮೋನಿಯಾ ಹಾಗೂ ರಕ್ತಕ್ಯಾನ್ಸರ್ ನಿಂದ ಬಳಲುತ್ತಿದ್ದ ಈ ಬಾಲಕನಿಗೆ ಏಮ್ಸ್ ನ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 

ಬಾಲಕನ ಸಂಪರ್ಕಕ್ಕೆ ಬಂದಿದ್ದ ಸಿಬ್ಬಂದಿಗಳು ತಮ್ಮ ಆರೋಗ್ಯ ಹಾಗೂ ಲಕ್ಷಣಗಳ ಬಗ್ಗೆ ನಿಗಾ ವಹಿಸಬೇಕೆಂದು ಏಮ್ಸ್ ಅಧಿಕಾರಿಗಳು ಹೇಳಿದ್ದಾರೆ. H5N1 ಏವಿಯನ್ ಫ್ಲೂ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಮನುಷ್ಯರಲ್ಲಿಯೂ ಇದು ಹರಡಬಹುದಾಗಿದೆ. ರೋಗಪೀಡಿತ ಹಕ್ಕಿಗಳಿಂದ ಮನುಷ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಹಾಗೂ ಮನುಷ್ಯರಿಂದ ಮನುಷ್ಯರಿಗೂ ಹರಡುವ ಸಾಮರ್ಥ್ಯ ಹೊಂದಿದೆ.ಸೋಂಕು ತಗುಲಿದರೆ ಮಾರಣ ಪ್ರಮಾಣ ಶೇ.60 ರಷ್ಟಿದೆ. ಹೆಚ್5ಎನ್1 ವೈರಾಣು ಮರಣ ಪ್ರಮಾಣವನ್ನು ಹೆಚ್ಚಿರುವ  ತೀವ್ರವಾದ ಶೀತಜ್ವರವನ್ನು ಉಂಟುಮಾಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com