ಕೋವಿಡ್ ಸಾಂಕ್ರಾಮಿಕದಿಂದ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಅನಾಥ: ವರದಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಒಕ್ಕರಿಸಿದ ಮೊದಲ 14 ತಿಂಗಳಲ್ಲಿಯೇ ಸುಮಾರು 1 ಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್ (ಎನ್‌ಐಡಿಎ) ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ದು, 'ಕೋವಿಡ್ ಸಾಂಕ್ರಾಮಿಕದ  ಮೊದಲ 14 ತಿಂಗಳಲ್ಲಿ ಭಾರತದಲ್ಲಿ 1,19,000 ಮಕ್ಕಳು ಸೇರಿದಂತೆ 21 ದೇಶಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಪ್ರಾಥಮಿಕ ಮತ್ತು ದ್ವಿತೀಯಕ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ವರದಿ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿದೆ ಎಂದೂ ಅಧ್ಯಯನ ತಿಳಿಸಿದೆ.

ಭಾರತದಲ್ಲಿ 25,500 ಮಕ್ಕಳು ತಮ್ಮ ತಾಯಿಯನ್ನು ಕೋವಿಡ್ -19 ಗೆ ಕಳೆದುಕೊಂಡರೆ, 90,751 ಮಂದಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. 12 ಮಂದಿ ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಅಂತೆಯೇ ವಿಶ್ವಾದ್ಯಂತ ಕೋವಿಡ್ ಕಾರಣದಿಂದಾಗಿ 11,34,000 ಮಕ್ಕಳು ಪೋಷಕರು ಅಥವಾ ಪಾಲನೆ ಮಾಡುತ್ತಿದ್ದ ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 10,42,000 ಮಕ್ಕಳು ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಒಬ್ಬರನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ,  15,62,000 ಮಕ್ಕಳು ಕನಿಷ್ಠ ಒಬ್ಬ ಪೋಷಕರು ಅಥವಾ ಪಾಲಕರು ಅಥವಾ ಇತರ ಸಹ-ವಾಸಿಸುವ ಅಜ್ಜ (ಅಥವಾ ಇತರ ಹಳೆಯ ಸಂಬಂಧಿ) ಸಾವಪ್ಪಿದ್ದಾರೆಂದು ಅಂದಾಜಿಸಲಾಗಿದೆ ಎಂದು ಎನ್ಐಎಚ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾಥಮಿಕ ಆರೈಕೆದಾರರನ್ನು (ಪೋಷಕರು ಅಥವಾ ಪಾಲನೆ ಅಜ್ಜಿಯರು) ಕಳೆದುಕೊಂಡಿರುವ ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ, ಪೆರು, ಯುನೈಟೆಡ್ ಸ್ಟೇಟ್ಸ್, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೊ ಸೇರಿವೆ.

ಪ್ರಾಥಮಿಕ ಆರೈಕೆದಾರರಲ್ಲಿ (1/1000 ಮಕ್ಕಳು) ಕೋವಿಡ್-ಸಂಬಂಧಿತ ಸಾವಿನ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಪೆರು, ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಬ್ರೆಜಿಲ್, ಕೊಲಂಬಿಯಾ, ಇರಾನ್, ಯುನೈಟೆಡ್ ಸ್ಟೇಟ್ಸ್, ಅರ್ಜೆಂಟೀನಾ ಮತ್ತು ರಷ್ಯಾ ಸೇರಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com