ಉತ್ತರ ಪ್ರದೇಶ: ಜೀನ್ಸ್ ಧರಿಸಿದ್ದಕ್ಕೆ ಆಕ್ರೋಶ; ಅಪ್ರಾಪ್ತ ಬಾಲಕಿಯನ್ನು ಹೊಡೆದು ಕೊಂದ ಅಜ್ಜ, ಚಿಕ್ಕಪ್ಪಂದಿರು!

ತಮ್ಮ ಮಾತನ್ನು ಧಿಕ್ಕರಿಸಿ ಜೀನ್ಸ್ ಧರಿಸುತ್ತಿದ್ದ ಹದಿಹರೆಯದ ಬಾಲಕಿಯನ್ನು ಆಕೆಯ ಕುಟುಂಬ ಸದಸ್ಯರು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಿಯೋರಿಯಾ(ಉತ್ತರ ಪ್ರದೇಶ): ತಮ್ಮ ಮಾತನ್ನು ಧಿಕ್ಕರಿಸಿ ಜೀನ್ಸ್ ಧರಿಸುತ್ತಿದ್ದ ಹದಿಹರೆಯದ ಬಾಲಕಿಯನ್ನು ಆಕೆಯ ಕುಟುಂಬ ಸದಸ್ಯರು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವ್ರೆಜಿ ಖಾರ್ಗ್ ಗ್ರಾಮದ 17 ವರ್ಷದ ಬಾಲಕಿಯನ್ನು ಸೋಮವಾರ ಜೀನ್ಸ್ ಮತ್ತು ಟಾಪ್ ಧರಿಸದಂತೆ ಒತ್ತಾಯಿಸಿದ್ದರು. ಆದರೆ ಈ ಮಾತುಗಳನ್ನು ಧಿಕ್ಕರಿಸಿದ್ದರಿಂದ ಅಜ್ಜ, ಚಿಕ್ಕಪ್ಪಂದಿರು ಸೇರಿಕೊಂಡು ತೀವ್ರವಾಗಿ ಥಳಿಸಿದ್ದಾರೆ. ಥಳಿತದಿಂದಾಗಿ ಬಾಲಕಿ ಮೃತಪಟ್ಟಿದ್ದು ನಂತರ ಆಕೆಯನ್ನು ಶವವನ್ನು ಕಶ್ಯ-ಪಾಟ್ನಾ ಹೆದ್ದಾರಿಯಲ್ಲಿರುವ ಪತನ್ವಾ ಸೇತುವೆಯಿಂದ ಎಸೆಯಲು ಮುಂದಾಗಿದ್ದಾರೆ. ಆದರೆ ಶವ ಸೇತುವೆಯ ಗ್ರಿಲ್ ಗೆ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಾಯಿ ನೀಡಿದ ದೂರಿನ ಪ್ರಕಾರ, ಬಾಲಕಿ ತಲೆಯನ್ನು ಗೋಡೆಗೆ ಗುದ್ದಿದ್ದರಿಂದ ಆಕೆಗೆ ಗಂಭೀರವಾದ ಗಾಯವಾಗಿದ್ದು ಆಕೆಯ ಸಾವಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ತಲೆಗೆ ತೀವ್ರವಾದ ಗಾಯ ಮತ್ತು ಮುರಿತ ಕೂಡ ಖಚಿತವಾಗಿದೆ ಎಂದು ಸರ್ಕಲ್ ಅಧಿಕಾರಿ ಯಶ್ ತ್ರಿಪಾಠಿ ತಿಳಿಸಿದ್ದಾರೆ.

ಮೃತ ಬಾಲಕಿಯ ತಾಯಿ, ಅಜ್ಜಿ ಸೇರಿದಂತೆ 10 ಜನರ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್ 201(ಅಪರಾಧ ಸಾಕ್ಷಿ ನಾಶ ಯತ್ನ), 302(ಕೊಲೆ) ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾವಾಡಿ ಎಸ್‌ಎಚ್‌ಒ ರಾಮ್ ಮೋಹನ್ ಸಿಂಗ್ ಹೇಳಿದ್ದಾರೆ.

ಘಟನೆ ವಿವರ:
ಮೃತ ಬಾಲಕಿ ತಂದೆ ಪಂಜಾಬ್ ನ ಲುಧಿಯಾನದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಲುಧಿಯಾನಕ್ಕೆ ತೆರಳಿದ್ದ ಬಾಲಕಿ ಜೀನ್ಸ್, ಟಾಪ್ ಧರಿಸಲು ಪ್ರಾರಂಭಿಸಿದ್ದಾಳೆ. ಆದರೆ ಈ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜೀನ್ಸ್ ಧರಿಸಬಾರದು ಎಂಬ ಕಟ್ಟಳೆಯನ್ನು ವಿಧಿಸಲಾಗಿತ್ತು. ಈ ಕಟ್ಟಳೆಯನ್ನು ಧಿಕ್ಕರಿಸುತ್ತಿದ್ದರಿಂದ ಬಾಲಕಿಯನ್ನು ಹತ್ಯೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com