ಪನ್ನೀರ್ ಸೆಲ್ವಂ, ನನ್ನ ನಡುವೆ ಯಾವುದೇ ರೀತಿಯ ಶೀಥಲ ಸಮರ ಇಲ್ಲ; ಪಕ್ಷದಲ್ಲಿ ಶಶಿಕಲಾಗೆ ಸ್ಥಾನ ಇಲ್ಲ: ಮಾಜಿ ಸಿಎಂ ಪಳನಿ ಸ್ವಾಮಿ

ಮಾಜಿ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ನನ್ನ ನಡುವೆ ಯಾವುದೇ ರೀತಿಯ ಶೀಥಲ ಸಮರವಿಲ್ಲ. ಅಂತೆಯೇ ಪಕ್ಷದಲ್ಲಿ ಶಶಿಕಲಾ ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ಕಾರಣಕ್ಕೂ ಸ್ಥಾನವಿಲ್ಲ ಎಂದು ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಹೇಳಿದ್ದಾರೆ.
ಇ ಪಳನಿ ಸ್ವಾಮಿ
ಇ ಪಳನಿ ಸ್ವಾಮಿ

ಚೆನ್ನೈ: ಮಾಜಿ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ನನ್ನ ನಡುವೆ ಯಾವುದೇ ರೀತಿಯ ಶೀಥಲ ಸಮರವಿಲ್ಲ. ಅಂತೆಯೇ ಪಕ್ಷದಲ್ಲಿ ಶಶಿಕಲಾ ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ಕಾರಣಕ್ಕೂ ಸ್ಥಾನವಿಲ್ಲ ಎಂದು ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಪಳನಿಸ್ವಾಮಿ ಅವರು, ನನ್ನ ಮತ್ತು ಪನ್ನೀರ್ ಸೆಲ್ವಂ ಅವರ ನಡುವೆ ಯಾವುದೇ ರೀತಿಯ ಗೊಂದಲಗಳಿಲ್ಲ. ಇದು ಮಾಧ್ಯಮಗಳ ಸೃಷ್ಟಿಯಷ್ಟೇ.. ಇಂತಹ ತಪ್ಪು ಕಲ್ಪನೆಗಳನ್ನು ಕಾರ್ಯಕರ್ತರು ನಂಬಬಾರದು ಎಂದು  ಹೇಳಿದ್ದಾರೆ. ಇದೇ ವೇಳೆ ಕೆಲವರು ಬೇಕೆಂದೇ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದು, ಪಕ್ಷದಲ್ಲಿ ವಿ.ಕೆ.ಶಶಿಕಲಾ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ರೀತಿಯ ಅವಕಾಶವಿಲ್ಲ. ಕೆಲವು ಅಂಶಗಳು ಅವರ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಾಡುವ ಮೂಲಕ ಗೊಂದಲ ಸೃಷ್ಟಿಸಲು ಕೆಲವರು  ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

'ಶಶಿಕಲಾ ಎಐಎಡಿಎಂಕೆ ಪಕ್ಷದೊಂದಿಗೆ ಇಲ್ಲ. ಈಗಾಗಲೇ ಶಶಿಕಲಾ ಅವರು ರಾಜಕೀಯದಿಂದ ದೂರ ಸರಿದಿದ್ದಾರೆ ಎಂದು ಘೋಷಿಸಿದ್ದರು. ಈಗ ಅವರು ಎಎಂಎಂಕೆ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದು, ಇದು ಕೇವಲ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದಷ್ಟೇ.. ಕೆಲವು ಅಂಶಗಳು ತಪ್ಪು  ಮಾಹಿತಿಯನ್ನು ಹರಡುತ್ತಿವೆ. ಆದರೆ ಅವರ ಈ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಎಐಎಡಿಎಂಕೆ ಎಲ್ಲಾ ಪದಾಧಿಕಾರಿಗಳು ಪಕ್ಷದಲ್ಲಿ ಅವರ ಕುಟುಂಬಕ್ಕೆ ಸ್ಥಾನವಿಲ್ಲ ಎಂದು ದೃಢವಾಗಿ ಹೇಳಿದ್ದಾರೆ. ಈ ನಿರ್ಣಯವನ್ನು ಘೋಷಿಸಿದ ನಂತರವೇ ನಾವು ವಿಧಾನಸಭಾ ಚುನಾವಣೆಯಲ್ಲಿ ಅನೇಕ ಸ್ಥಾನಗಳನ್ನು  ಗೆದ್ದಿದ್ದೇವೆ. ”

ಇನ್ನು ಚುನಾವಣೆಯಲ್ಲಿನ ಸೋಲಿನ ಕುರಿತು ಇಂದು ಪಳನಿಸ್ವಾಮಿ ಸಭೆ ನಡೆಸಿದರು. ಚೆನ್ನೈನಲ್ಲಿ ಪಕ್ಷದ ಒಂಬತ್ತು ಜಿಲ್ಲೆಗಳ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದರು.

ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿ ಭರ್ಜರಿ ಜಯ ಸಾಧಿಸಿತ್ತು. ಚುನಾವಣಾ ಸೋಲಿನ ನಂತರ, ವಿರೋಧ ಪಕ್ಷದ ನಾಯಕರು ಯಾರು ಎಂಬ ಆಯ್ಕೆಯ ಬಗ್ಗೆ ಎಐಎಡಿಎಂಕೆ ಪಕ್ಷದಲ್ಲೇ ಶೀಥಲ ಸಮರ ನಡೆದಿತ್ತು ಎಂದು ಹೇಳಲಾಗಿದೆ. ಒ.ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ  ಪಳನಿಸಾಮಿ ಇಬ್ಬರೂ ಪ್ರತಿಪಕ್ಷದ ನಾಯಕ ಹುದ್ದೆಗಾಗಿ ಪ್ರಯತ್ನ ಪಟ್ಟಿದ್ದರು. ಅಂತಿಮವಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದರು. ಇದರ ನಡುವೆಯೇ ಶಶಿಕಲಾ ಅವರದ್ದು ಎನ್ನಲಾದ ಆಡಿಯೋವೊಂದು ಎಐಎಡಿಎಂಕೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಆಡಿಯೋದಲ್ಲಿ ಶಶಿಕಲಾ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವ  ಕುರಿತು ಮಾತನಾಡಿದ್ದು, ಅಲ್ಲದೆ ಚುನಾವಣೆ ಸೋಲಿನ ಬಳಿಕ ಎಐಎಡಿಎಂಕೆ ಮುಖಂಡರು ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾದ ಆಡಿಯೋ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com