ಕೋವಿಡ್-19: 'ಕೋವ್ಯಾಕ್ಸಿನ್' ತುರ್ತು ಬಳಕೆಗೆ ಅಮೆರಿಕಾ ಎಫ್ ಡಿಎ ಅನುಮತಿ ನಿರಾಕರಣೆ!

ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಹಿನ್ನಡೆಯುಂಟಾಗಿದೆ. ಅಮೆರಿಕಾದ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ) ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಹಿನ್ನಡೆಯುಂಟಾಗಿದೆ. ಅಮೆರಿಕಾದ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ) ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದೆ.

ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಭಾರತ್ ಬಯೋಟೆಕ್ ​​ಎಫ್​ಡಿಎಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಎಫ್​ಡಿಎ ಅಮೆರಿಕದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. 

ಭಾರತ್ ಬಯೋಟೆಕ್​ನ ಅಮೆರಿಕಾದ ಪಾಲುದಾರ ಆಕ್ಯುಜೆನ್​ಗೆ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿರುವ ಎಫ್​ಡಿಎ, ಹೆಚ್ಚುವರಿ ಪ್ರಯೋಗಳನ್ನು ನಡೆಸಿ ಆ ವರದಿಗಳನ್ನು ನೀಡಿದರೆ ಮಾತ್ರ ಅಮೆರಿಕದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಲು ಸಾಧ್ಯ. ಅಲ್ಲಿಯವರೆಗೂ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. 

ಈ ಬೆಳವಣಿಗೆಯು ಅಮೆರಿಕಾದಲ್ಲಿ ಕೋವ್ಯಾಕ್ಸಿನ್ ಲಸಿಕೆ ಆರಂಭವನ್ನು ಮತ್ತಷ್ಟು ವಿಳಂಬ ಮಾಡಬಹುದು ಎಂದು ಭಾರತ್ ಬಯೋಟೆಕ್​ನ ಅಮೆರಿಕಾದ ಪಾಲುದಾರ ಆಕ್ಯೂಜನ್ ಹೇಳಿಕೆ ನೀಡಿದೆ. 

ಪ್ರಸ್ತುತದ ಬೆಳವಣಿಗೆಯು ನಮ್ಮ ಸಮಯವನ್ನು ಮತ್ತಷ್ಟು ವಿಸ್ತರಿಸಬಹುದು. ಆದರೆ, ಕೋವ್ಯಾಕ್ಸಿನ್ ಲಸಿಕೆಯನ್ನು ಅಮೆರಿಕಾಗೆ ತರಲು ನಾವು ಬದ್ಧರಾಗಿದ್ದೇವೆಂದು ಆಕ್ಯುಜೆನ್'ನ ಸಹ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಮುಸುನೂರಿಯವರು ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಹಿಂದೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ಸೂಚನೆ ನೀಡಿತ್ತು. 

ಏಪ್ರಿಲ್ 18ರಂದು ಭಾರತ್ ಬಯೋಟೆಕ್ ಸಂಸ್ಥೆ ಮೇ 18ರಂದು ಇಒಐ (ಎಕ್ಸ್'ಪ್ರೆಷನ್ ಆಫ್ ಇಂಟ್ರೆಸ್ಟ್) ವ್ಯಾಕ್ಸಿನ್ ತುರ್ತು ಬಳಕೆಯ ಅನುಮತಿ ಕೋರಿ ವಿಶ್ವ ಸಂಸ್ಥೆಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಮೇ 18ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ಕೇಳಿತ್ತು. 

ಕೋವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆ ಪಟ್ಟಿ(ಇಯುಎಲ್)ಯಲ್ಲಿ ಸ್ಥಾನ ಪಡೆಯುವ ಸಂಬಂಧ ಈಗಾಗಲೇ ಶೇ.90ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಈ ಹಿಂದೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

ಕೋವ್ಯಾಕ್ಸಿನ್‌ ತುರ್ತು ಬಳಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಪಡೆಯುವ ಕುರಿತ ಚರ್ಚೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಿಮಿಟೆಡ್ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com