ಒಂದು ಡೋಸ್ ಗೆ ರೂ.150: ಈ ಬೆಲೆ ಸಮರ್ಥನೀಯವಲ್ಲ; ಕೋವ್ಯಾಕ್ಸಿನ್ ಸರಬರಾಜು ದರ ಕುರಿತು ಭಾರತ್ ಬಯೋಟೆಕ್!

ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಚಿಸಿರುವ ಸರಬರಾಜು ಬೆಲೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆ, 'ಸ್ಪರ್ಧಾತ್ಮಕವಲ್ಲದ, ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲದ್ದು' ಎಂದು ಹೇಳಿದೆ.
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಚಿಸಿರುವ ಸರಬರಾಜು ಬೆಲೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆ, 'ಸ್ಪರ್ಧಾತ್ಮಕವಲ್ಲದ, ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲದ್ದು' ಎಂದು ಹೇಳಿದೆ.

ಈ ಹಿಂದೆ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಪ್ರತೀ ಡೋಸ್ ನ ಮೇಲೆ 150 ರೂಗಳ ಸರಬರಾಜು ವೆಚ್ಚ ನಿಗದಿ ಮಾಡಿತ್ತು. ಆದರ ಈ ದರ ನಿಗದಿ ಕುರಿತು ಭಾರತ್ ಬಯೋಟೆಕ್ ಸಂಸ್ಥೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ನಿಗದಿ ಪಡಿಸಿರುವ 150 ರೂಗಳ ಸರಬರಾಜು ದರ ತೀರ ಕಡಿಮೆಯಾಗಿದ್ದು, ಸ್ಪರ್ಧಾತ್ಮಕವಲ್ಲದ ಬೆಲೆ ಮತ್ತು ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ. ವೆಚ್ಚಗಳ ಭಾಗವನ್ನು ಸರಿದೂಗಿಸಲು ಖಾಸಗಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆ ಅಗತ್ಯವಿದೆ ಎಂದು ಹೇಳಿದೆ.

'ಭಾರತ ಸರ್ಕಾರದ ನಿರ್ದೇಶನದಂತೆ, ಇಲ್ಲಿಯವರೆಗಿನ ನಮ್ಮ ಒಟ್ಟು ಕೊವಾಕ್ಸಿನ್ ಉತ್ಪಾದನೆಯಲ್ಲಿ ಶೇಕಡಾ 10 ಕ್ಕಿಂತಲೂ ಕಡಿಮೆ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ, ಉಳಿದ ಹೆಚ್ಚಿನ ಪ್ರಮಾಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸರಬರಾಜು ಮಾಡಲಾಗಿದೆ.  ಇಂತಹ ಸನ್ನಿವೇಶದಲ್ಲಿ ಎಲ್ಲಾ ಸರಬರಾಜುಗಳಲ್ಲಿ ನೀಡಲಾದ ಕೋವಾಕ್ಸಿನ್ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ ಸರಾಸರಿ 250 ರೂ.ಗಿಂತ ಕಡಿಮೆಯಿದೆ. ಶೇ.75 ರಷ್ಟು ಸಾಮರ್ಥ್ಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸರಬರಾಜು ಮಾಡಲಾಗುವುದು ಮತ್ತು ಕೇವಲ ಶೇ.25  ರಷ್ಟು ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತೆಯೇ ಪ್ರಸ್ತುತ ದೇಶದಲ್ಲಿ ರೂಪಾಂತರಿ ವೈರಸ್ ಗಳ ಕುರಿತು ಸಾಕಷ್ಟು ಅಧ್ಯಯನ ನಡೆಯುತ್ತಿದ್ದು, ನಮ್ಮ ಸಂಸ್ಥೆ ಕೂಡ ರೂಪಾಂತರಿ ವೈರಸ್ ಗಳ ಮೇಲೆ ಲಸಿಕೆ ಪ್ರಯೋಗ ನಡೆಸುತ್ತಿದೆ. ಇಂತಹ ಸಂರ್ಭದಲ್ಲಿ ಸರ್ಕಾರದ ಈ ನಡೆ ನಮ್ಮ ಯೋಜನೆಗಳಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ದೇಶದಲ್ಲಿ ಲಸಿಕೆಗೆ ತೀವ್ರ ಬೇಡಿಕೆ ಇದ್ದು, ಸರ್ಕಾರ ನಿರ್ದೇಶಿಸಿರುವ ದರದಲ್ಲಿ ಲಸಿಕೆ ವಿತರಣೆ ಮಾಡಿದರೆ ಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಸ್ಥೆಯ ಲಸಿಕೆ ಉತ್ಪಾದನೆಯ ಮೂಲ ಪರಿಣಾಮ ಬೀರಿ ಉತ್ಪಾದನಾ ಕುಂಠಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.   

ಅಲ್ಲದೆ "ಉತ್ಪನ್ನ ಅಭಿವೃದ್ಧಿಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಹೊಸತನವನ್ನು ಹೊಂದಿರುವ ಭಾರತ್ ಬಯೋಟೆಕ್ ಮತ್ತು ದೊಡ್ಡ ಪ್ರಮಾಣದ ಉತ್ಪಾದನೆಯು ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇದಾತ್ಮಕ ಬೆಲೆ ತಂತ್ರವನ್ನು ನಿರ್ವಹಿಸಲು ಅವಕಾಶ ನೀಡಬೇಕು" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com