ಪರಮ್ ಬಿರ್ ಸೂಚನೆ ಮೇರೆಗೆ ಕ್ರಿಕೆಟ್ ಬುಕ್ಕಿಗಳಿಂದ ಸಚಿನ್ ವಾಝೆ ಹಣ ವಸೂಲಿ: ಕೋರ್ಟ್ ಗೆ ಪೊಲೀಸರು 

ಹಣ ಸುಲಿಗೆಯ ಆರೋಪದಡಿ ಮುಂಬೈ ನ ಎಸ್ಪ್ಲೇನೇಡ್ ಕೋರ್ಟ್ ಸೇವೆಯಿಂದ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ನ.13 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ

ಮುಂಬೈ: ಹಣ ಸುಲಿಗೆಯ ಆರೋಪದಡಿ ಮುಂಬೈ ನ ಎಸ್ಪ್ಲೇನೇಡ್ ಕೋರ್ಟ್ ಸೇವೆಯಿಂದ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ನ.13 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಮುಂಬೈ ಪೊಲೀಸರು ಕೋರ್ಟ್ ಗೆ ನೀಡಿರುವ ಮಾಹಿತಿಯ ಪ್ರಕಾರ ಸಚಿನ್ ವಾಝೆ, ಮುಂಬೈ ನ ನಿಕಟಪೂರ್ವ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರ ಸೂಚನೆಯ ಮೇರೆಗೆ ಕ್ರಿಕೆಟ್ ಬುಕ್ಕಿಗಳಿಂದ ಹಣ ಸುಲಿಗೆ ಮಾಡುತ್ತಿದ್ದರು. ಸುಲಿಗೆ ಪ್ರಕರಣದ ಆರೋಪಿ ಪರಮ್ ಬಿರ್ ಸಿಂಗ್ ಈಗ ನಾಪತ್ತೆಯಾಗಿದ್ದಾರೆ.

ವಿಶೇಷ ಸರ್ಕಾರಿ ಅಭಿಯೋಜಕ ಶೇಖರ್ ಜಗ್ತಾಪ್, ಇಬ್ಬರೂ ಪೊಲೀಸ್ ಅಧಿಕಾರಿಗಳು ಹಣ ಸುಲಿಗೆ ಮಾಡುವುದಕ್ಕಾಗಿ ಬುಕ್ಕಿಗಳನ್ನು ಎಫ್ಐಆರ್ ಹೆಸರಿನಲ್ಲಿ ಬೆದರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ವಾಝೆ ಪರ ವಕೀಲರು, ತಮ್ಮ ಕಕ್ಷಿದಾರ ತನಿಖೆಗೆ ಸಹಕರಿಸಲು ಬಯಸುತ್ತಿದ್ದಾರೆ, ಪೊಲೀಸ್ ಕಸ್ಟಡಿಯಲ್ಲಿರಲು ಒಪ್ಪಿದ್ದಾರೆ ಎಂದು ಹೇಳಿದ್ದು ವಾಝೆಯನ್ನು ಪೊಲೀಸ್ ಕಸ್ಟಡಿಗೆ ಕೋರ್ಟ್ ಕಳುಹಿಸಿದೆ.

ಸುಲಿಗೆ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಕ್ಕಾಗಿ ಅಪರಾಧ ವಿಭಾಗ ಕೋರ್ಟ್ ಗೆ ಸಿಆರ್ ಪಿಸಿ 164 ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ನ.8 ರಂದು ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ಕೋರ್ಟ್ ಅನುಮತಿ ನೀಡಿದೆ. ಇದಕ್ಕೂ ಮುನ್ನ ನ.1 ರಂದು ಎಸ್ಪ್ಲೇನೇಡ್ ಕೋರ್ಟ್ ಸಚಿನ್ ವಾಝೆಯನ್ನು ನ.06 ವರೆಗೂ ಅಪರಾಧ ವಿಭಾಗದ ಕಸ್ಟಡಿಗೆ ವಹಿಸಿತ್ತು. 

ಜು.23 ರಂದು ಪರಮ್ ಬಿರ್ ಸಿಂಗ್, ಸಚಿನ್ ವಾಝೆ ಹಾಗೂ ಇತರರ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು ಹಾಗೂ 100 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಚಂಡಿವಾಲ್ ನ್ಯಾಯಾಂಗ ಆಯೋಗ  ಜಾಮೀನು ನೀಡಬಹುದಾದ ವಾರೆಂಟ್ ನ್ನು ಪರಮ್ ಬಿರ್ ಸಿಂಗ್ ವಿರುದ್ಧ ಜಾರಿಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com