ಕೊರೋನಾ ಹೊಸ ರೂಪಾಂತರ ಓಮಿಕ್ರಾನ್ ಎಷ್ಟು ಡೇಂಜರ್? ಎಷ್ಟು ದೇಶಗಳಲ್ಲಿ ಈ ಕೇಸ್‌ಗಳು ಪತ್ತೆ?
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸೊಂಡಿರುವ ಹೊಸ ರೂಪಾಂತರ ವಿಶ್ವಕ್ಕೆ ಮತ್ತೊಮ್ಮೆ ಬೆದರಿಕೆವೊಡ್ಡುತ್ತಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದ್ದು, ಕಳೆದ ಒಂದು ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇಕಡ 200 ರಷ್ಟು ಹೆಚ್ಚಾಗಿದೆ.
Published: 27th November 2021 03:12 PM | Last Updated: 27th November 2021 05:13 PM | A+A A-

ಸಾಂದರ್ಭಿಕ ಚಿತ್ರ
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸೊಂಡಿರುವ ಹೊಸ ರೂಪಾಂತರ ವಿಶ್ವಕ್ಕೆ ಮತ್ತೊಮ್ಮೆ ಬೆದರಿಕೆವೊಡ್ಡುತ್ತಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದ್ದು, ಕಳೆದ ಒಂದು ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇಕಡ 200 ರಷ್ಟು ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಿಂದ ಹುಟ್ಟಿಕೊಂಡ ಈ ರೂಪಾಂತರವು ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೋಟ್ಸ್ವಾನಾ ದೇಶಗಳಿಗೆ ವ್ಯಾಪಿಸಿದೆ. ವಿಜ್ಞಾನಿಗಳು ಇದನ್ನು ಭಯಾನಕ ಮತ್ತು ಅತ್ಯಂತ ಕೆಟ್ಟ ರೂಪಾಂತರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸ ರೂಪಾಂತರಿ ಹೆಸರೇನು?
ಈ ಹೊಸ ರೂಪಾಂತರವನ್ನು ಓಮಿಕ್ರಾನ್ (B.1.1.529) ಎಂದು ಹೆಸರಿಸಲಾಗಿದೆ. ರೂಪಾಂತರವು ಒಟ್ಟು 50 ರೂಪಾಂತರಗಳನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಹೊಸ ರೂಪಾಂತರಿ 30 ಸ್ಪೈಕ್ ಪ್ರೋಟೀನ್ ಹೊಂದಿದ್ದು, ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ.
ಈವರೆಗೆ ಎಷ್ಟು ಪ್ರಕರಣಗಳು ಪತ್ತೆಯಾಗಿವೆ?
ಈ ರೂಪಾಂತರದ ಮೊದಲ ಪ್ರಕರಣಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಈವರೆಗೆ ಇಲ್ಲಿ 77 ಜನರು ಈ ರೂಪಾಂತರದಿಂದ ಸೋಂಕಿಗೆ ತುತ್ತಾಗಿದ್ದಾರೆ. ಬೋಟ್ಸ್ವಾನಾದಲ್ಲಿ 4 ಜನರು ಈ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ. ಕಳವಳಕಾರಿ ಸಂಗತಿಯೆಂದರೆ ಬೋಟ್ಸ್ವಾನಾದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸಹ ಇದಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ, ಈ ಹೊಸ ರೂಪಾಂತರದ 2 ಪ್ರಕರಣಗಳು ಹಾಂಗ್ ಕಾಂಗ್‌ನಲ್ಲಿಯೂ ಕಂಡುಬಂದಿವೆ. ಪ್ರಸ್ತುತ, ಇಬ್ಬರು ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ನಿಗಾವಹಿಸಲಾಗಿದೆ. ಈ ಸೋಂಕಿಗೆ ಒಳಗಾಗಿರುವ ಒಂದು ಪ್ರಕರಣವೂ ಇಸ್ರೇಲ್‌ನಲ್ಲಿ ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ದಕ್ಷಿಣ ಆಫ್ರಿಕಾದ ಮಲಾವಿಯಿಂದ ಮರಳಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಒಮೈಕ್ರಾನ್' ರೂಪಾಂತರಿ ಕೊರೋನಾ ವೇಗವಾಗಿ ಹಬ್ಬುವ ಸಾಧ್ಯತೆಯಿದೆ, ಎಚ್ಚರವಾಗಿರಿ: ಆರೋಗ್ಯ ಸಚಿವ ಡಾ ಕೆ ಸುಧಾಕರ್
ಈ ಓಮಿಕ್ರಾನ್ ಎಷ್ಟು ಅಪಾಯಕಾರಿ?
ಆತಂಕಕಾರಿ ಸಂಗತಿಯೆಂದರೆ, ರೂಪಾಂತರದ 50 ರೂಪಾಂತರಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾದ ಪ್ರೊಫೆಸರ್ ಟುಲಿಯೊ ಡಿ ಒಲಿವೇರಾ, ಈ ರೂಪಾಂತರವು ಕ್ಲಸ್ಟರ್‌ನಂತಿದ್ದು, ಮತ್ತು ಹಿಂದೆ ಹರಡುವ ರೂಪಾಂತರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದ್ದಾರೆ. ಸ್ಪೈಕ್ ಪ್ರೋಟೀನ್ ಲಸಿಕೆ ಕೆಲಸ ಮಾಡುವ ದೇಹದ ಭಾಗವಾಗಿದ್ದು, ಈ ರೂಪಾಂತರದ ಮೇಲೆ ಲಸಿಕೆ ಪರಿಣಾಮಕಾರಿಯಾಗದಿರುವ ಸಾಧ್ಯತೆಯೂ ಹೆಚ್ಚಿದೆ.
ಲಸಿಕೆ ಅದರ ಮೇಲೆ ಪರಿಣಾಮ ಬೀರುವುದಿಲ್ಲವೇ?
ಈಗ ಸದ್ಯ ಲಭ್ಯವಿರುವ ಲಸಿಕೆಗಳು ಚೀನಾ ವೈರಸ್ ಗೆ ಅನುಗುಣವಾಗಿವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್ ಭಿನ್ನವಾಗಿರುವುದರಿಂದ ಈ ರೂಪಾಂತರದ ವಿರುದ್ಧ ಈಗಿನ ಲಸಿಕೆ ಪರಿಣಾಮಕಾರಿಯಾಗಿದ್ದರೂ ಅದರ ದಕ್ಷತೆಯನ್ನು ಈ ವೈರಸ್ ಕಡಿಮ ಮಾಡಬಹುದು. ಆದರೆ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ಈ ಹೊಸ ತಳಿ ಎಲ್ಲಿಂದ ಬಂತು?
ರೂಪಾಂತರದ ಮೂಲವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇದು HIV/AIDS ಸೋಂಕಿಗೆ ಒಳಗಾದವರಿಂದ ಹರಡಿದೆ ಎಂದು ನಂಬಲಾಗಿದೆ. Tulio di Oliveira ಪ್ರಕಾರ, ಮೇ 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಬೀಟಾ ರೂಪಾಂತರವು ಏಡ್ಸ್ ಸೋಂಕಿತ ವ್ಯಕ್ತಿಯಿಂದ ಹರಡಿತು.
ಭಾರತ ಸರ್ಕಾರದ ತಕ್ಷಣ ಕ್ರಮ:
ರೂಪಾಂತರದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಕೇಂದ್ರ ಆರೋಗ್ಯ ಸಚಿವಾಲಯವು ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸ್ವಾನಾದಿಂದ ಆಗಮಿಸುವ ಅಥವಾ ಹೊರಡುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಈ ರೂಪಾಂತರದ ತುಂಬಾ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಈ ದೇಶಗಳಿಂದ ಪ್ರಯಾಣಿಸುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಅಪಾಯದ ವರ್ಗದಲ್ಲಿದ್ದಾರೆ ಅಂತಾ ತಿಳಿಸಿದ್ದಾರೆ. ಈ ಮಧ್ಯೆ ಡಬ್ಲುಎಚ್ಒ ಈ ರೂಪಾಂತರದ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ, ಸಂಶೋಧಕರು ಕೊರೋನಾ ರೂಪಾಂತರಿಗಳು ಹೇಗೆ ವರ್ತಿಸುತ್ತಿವೆ ಅನ್ನೋದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಅಂತಾ ತಿಳಿಸಿದೆ.