ಕೋವಿಡ್-19 ಸಾವಿನ ಸಂಖ್ಯೆ ಭಾರತದಲ್ಲಿ ಶೇ.13ರಷ್ಟು ಇಳಿಕೆ, ಸಕ್ರಿಯ ಪ್ರಕರಣ ಕೂಡ ಇಳಿಮುಖ: ವಿಶ್ವ ಆರೋಗ್ಯ ಸಂಸ್ಥೆ ವರದಿ

ಕೋವಿಡ್-19 ಹೊಸ ಪ್ರಕರಣ ಭಾರತದಲ್ಲಿ ಶೇಕಡಾ 18ರಷ್ಟು ಇಳಿಕೆಯಾಗಿದ್ದು, ಕಳೆದ ಅಕ್ಟೋಬರ್ 11ರಿಂದ 17ರವರೆಗೆ ಒಂದು ವಾರದ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡ ಶೇಕಡಾ 13ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಹೊಸ ಪ್ರಕರಣ ಭಾರತದಲ್ಲಿ ಶೇಕಡಾ 18ರಷ್ಟು ಇಳಿಕೆಯಾಗಿದ್ದು, ಕಳೆದ ಅಕ್ಟೋಬರ್ 11ರಿಂದ 17ರವರೆಗೆ ಒಂದು ವಾರದ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡ ಶೇಕಡಾ 13ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.

ಯುರೋಪ್ ಖಂಡದ ರಾಷ್ಟ್ರಗಳಲ್ಲಿ ಹೊರತುಪಡಿಸಿ ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಹೊಸ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಕಳೆದ 20 ತಿಂಗಳಿನಿಂದ ಕೋವಿಡ್ ಸೋಂಕು, ಸಾವಿನ ಸುದ್ದಿ ಓದಿ ನೊಂದು ಹೋದವರಿಗೆ ಸಿಹಿಸುದ್ದಿ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನಿನ್ನೆ ಬಿಡುಗಡೆ ಮಾಡಿದ ಕೋವಿಡ್ -19 ಸಾಪ್ತಾಹಿಕ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಂಕಿಅಂಶದಲ್ಲಿ, ಕೇವಲ 2.7 ದಶಲಕ್ಷ ಹೊಸ ಪ್ರಕರಣಗಳು ಮತ್ತು 46 ಸಾವಿರ ಹೊಸ ಸಾವುಗಳು ಅಕ್ಟೋಬರ್ 11 ರಿಂದ 17 ರವರೆಗೆ ಒಂದು ವಾರದಲ್ಲಿ ವರದಿಯಾಗಿದೆ, ಜಾಗತಿಕ ಮಟ್ಟದಲ್ಲಿ ಕೋವಿಡ್-19 ಹೊಸ ಪ್ರಕರಣಗಳು ಮತ್ತು ಸಾವುಗಳು ಹಿಂದಿನ ವಾರದಷ್ಟೇ ಇದೆ.

ಜಗತ್ತಿನ ಯಾವ್ಯಾವ ದೇಶಗಳಲ್ಲಿ ಎಷ್ಟೆಷ್ಟು?: ಕಳೆದೊಂದು ವಾರದಲ್ಲಿ  ಅತಿಹೆಚ್ಚು ಇಳಿಕೆ ಆಫ್ರಿಕನ್ ಪ್ರದೇಶದಿಂದ (18 ಪ್ರತಿಶತ), ಪಶ್ಚಿಮ ಪೆಸಿಫಿಕ್ ಪ್ರದೇಶದಿಂದ (16 ಪ್ರತಿಶತ) ವರದಿಯಾಗಿದೆ. ಆಫ್ರಿಕನ್ ದೇಶಗಳಲ್ಲಿ ಕಳೆದೊಂದು ವಾರದಲ್ಲಿ ಶೇಕಡಾ 25ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆಗ್ನೇಯ ಏಷ್ಯಾ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ 19 ಶೇಕಡಾ ಮತ್ತು 8 ಶೇಕಡಾ ಇಳಿಕೆಯಾಗಿದೆ.

ಜಾಗತಿಕವಾಗಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 240 ಮಿಲಿಯನ್‌ಗಿಂತ ಹೆಚ್ಚಾಗಿದೆ ಮತ್ತು ಒಟ್ಟು ಸಾವಿನ ಸಂಖ್ಯೆ 4.9 ಮಿಲಿಯನ್‌ಗಿಂತ ಕಡಿಮೆ ಇದೆ. ಹೊಸ ಕೊರೋನಾ ಪ್ರಕರಣಗಳು ಅಮರಿಕಾದಲ್ಲಿ ಅತಿಹೆಚ್ಚು (582,707 ಹೊಸ ಪ್ರಕರಣಗಳು; 11 ಪ್ರತಿಶತ ಇಳಿಕೆ), ಇಂಗ್ಲೆಂಡ್ (283,756 ಹೊಸ ಪ್ರಕರಣಗಳು; 14 ಶೇಕಡಾ ಹೆಚ್ಚಳ), ರಷ್ಯಾ (217,322 ಹೊಸ ಪ್ರಕರಣಗಳು; 15 ಶೇಕಡಾ ಹೆಚ್ಚಳ) , ಟರ್ಕಿ (213,981 ಹೊಸ ಪ್ರಕರಣಗಳು; ಹಿಂದಿನ ವಾರದಲ್ಲಿ ವರದಿಯಾದ ಸಂಖ್ಯೆಯಂತೆಯೇ) ಮತ್ತು ಭಾರತ (114,244 ಹೊಸ ಪ್ರಕರಣಗಳು; ಶೇ 18 ರಷ್ಟು ಇಳಿಕೆ) ವರದಿಯಾಗಿದೆ. 

ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2 ಲಕ್ಷದ 15 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣಗಳು ಮತ್ತು 2,900 ಕ್ಕೂ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ, ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡಾ 13 ಮತ್ತು 19 ರಷ್ಟು ಕಡಿಮೆಯಾಗಿದೆ.

ಹಿಂದಿನ ವಾರಕ್ಕೆ ಹೋಲಿಸಿದರೆ ಥೈಲ್ಯಾಂಡ್ ಹೊರತುಪಡಿಸಿ ಈ ವಾರ ಎಲ್ಲಾ ದೇಶಗಳು ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಭಾರತವು ಅತಿ ಹೆಚ್ಚು ಹೊಸ ಪ್ರಕರಣಗಳನ್ನು 114,244 ಎಂದು ವರದಿ ಮಾಡಿದರೂ, ಅವು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡಾ 18 ರಷ್ಟು ಇಳಿಕೆಯಾಗಿವೆ. ಥೈಲ್ಯಾಂಡ್ (72,817 ಹೊಸ ಪ್ರಕರಣಗಳು) ಮತ್ತು ಮ್ಯಾನ್ಮಾರ್ (9202 ಹೊಸ ಪ್ರಕರಣಗಳು) ಕೂಡ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com