ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪ: ಸಮೀರ್ ವಾಖೆಂಡೆಗೆ ಕಾನೂನು ರಕ್ಷಣೆ ಆದೇಶ ಹೊರಡಿಸಲು ಕೋರ್ಟ್ ನಿರಾಕರಣೆ

ಕ್ರೂಸಿ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಾಕ್ಷಿದಾರನ ಅಫಿಡವಿಟ್ ನ್ನು ನ್ಯಾಯಾಲಯ ಸ್ವೀಕರಿಸದಂತೆ ಕಾನೂನು ರಕ್ಷಣೆ ನೀಡುವ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿದೆ.  
ಸಮೀರ್ ವಾಂಖೆಡೆ
ಸಮೀರ್ ವಾಂಖೆಡೆ

ಮುಂಬೈ: ಕ್ರೂಸಿ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಾಕ್ಷಿದಾರನ ಅಫಿಡವಿಟ್ ನ್ನು ನ್ಯಾಯಾಲಯ ಸ್ವೀಕರಿಸದಂತೆ ಕಾನೂನು ರಕ್ಷಣೆ ನೀಡುವ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿದೆ. 

ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಆರೋಪಿಯಾಗಿರುವ ಪ್ರಕರಣದಲ್ಲಿ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಹಣ ಸುಲಿಗೆ ಯತ್ನ ನಡೆಸಿದ್ದಾರೆ ಎಂದು ಸಾಕ್ಷಿದಾರ ಪ್ರಭಾಕರ್ ಸ್ಮೈಲ್ ಆರೋಪಿಸಿದ್ದರು.

ತಮ್ಮ ವಿರುದ್ಧದ ಸುಲಿಗೆ ಆರೋಪದ ವಿರುದ್ಧ ಎನ್ ಸಿಬಿ ಹಾಗೂ ವಲಯ ನಿರ್ದೇಶಕ ಸಮೀರ್ ವಾಖೆಂಡೆ, ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಸ್ವತಂತ್ರ ಸಾಕ್ಷಿದಾರ ಪ್ರಭಾಕರ್ ಸ್ಮೈಲ್  ತಯಾರಾದ ಅಫಿಡವಿಟ್ ನಂತೆ  ಸ್ವಯಂ ಪ್ರೇರಿತವಾಗಿ ನ್ಯಾಯಾಲಯ ತೆಗೆದುಕೊಳ್ಳದಂತೆ ಕಾನೂನು ರಕ್ಷಣೆ ನೀಡುವಂತೆ ಆದೇಶ ಮಾಡುವಂತೆ  ಡ್ರಗ್ಸ್ ವಿರೋಧಿ ಏಜೆನ್ಸಿ ಹಾಗೂ ವಾಖೆಂಡೆ ಅಫಿಡವಿಟ್ ನಲ್ಲಿ ಕೋರಿದ್ದರು. 

ಈ ಪ್ರಕರಣದಲ್ಲಿ ತನಿಖೆಯ ಹಾದಿ ತಪ್ಪಿಸಲು, ತೊಡಕು ಉಂಟು ಮಾಡಲು ಸ್ಮೈಲ್ ಪ್ರಯತ್ನಿಸಿರುವುದಾಗಿ ಎನ್ ಸಿಬಿ ಮತ್ತು ಅದರ ವಲಯ ಅಧಿಕಾರಿ ಆರೋಪಿಸಿದ್ದರು. ಸಾಕ್ಷ್ಯ ತಿರುಚದಂತೆ ಅಥವಾ  ಪ್ರಕರಣದ ಹಾದಿ ತಪ್ಪಿಸದಂತೆ  ನ್ಯಾಯಾಲಯ ಸೂಕ್ತ ಆದೇಶ ನೀಡಬೇಕೆಂದು ಕೇಂದ್ರಿಯ ಏಜೆನ್ಸಿ ಕೋರಿತ್ತು. 

ಈ  ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠ, ಇಂತಹ ರಕ್ಷಣಾತ್ಮಕ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com