ಕ್ರೂಸ್ ಡ್ರಗ್ ಕೇಸು: 'ಬೇರೆ ಉದ್ದೇಶಕ್ಕೆ ಬಂದಿದ್ದೇನೆ' ಎಂದು ದೆಹಲಿಗೆ ಬಂದಿಳಿದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹೇಳಿಕೆ 

ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಂಧ ಮುಕ್ತಗೊಳಿಸಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎನ್ ಸಿಬಿ ಮುಂಬೈ ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕೇಳಿಬರುತ್ತಿರುವುದರ ಮಧ್ಯೆ ಸಮೀರ್ ವಾಂಖೆಡೆ ಕಳೆದ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ.
ದೆಹಲಿಗೆ ಬಂದಿಳಿದ ಸಮೀರ್ ವಾಂಖೆಡೆ
ದೆಹಲಿಗೆ ಬಂದಿಳಿದ ಸಮೀರ್ ವಾಂಖೆಡೆ

ನವದೆಹಲಿ: ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಂಧ ಮುಕ್ತಗೊಳಿಸಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎನ್ ಸಿಬಿ ಮುಂಬೈ ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕೇಳಿಬರುತ್ತಿರುವುದರ ಮಧ್ಯೆ ಸಮೀರ್ ವಾಂಖೆಡೆ ಕಳೆದ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ.

ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ (ಎನ್ ಸಿಬಿ)  ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ದೆಹಲಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಕಳೆದ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ  ಸಮೀರ್ ವಾಂಖೆಡೆ, ದೆಹಲಿಗೆ ತಾನು ಕೆಲವು ಕೆಲಸದ ನಿಮಿತ್ತ ಬಂದಿದ್ದು ಯಾರೂ ಸಮನ್ಸ್ ನೀಡಿ ಬಂದಿದ್ದಲ್ಲ ಎಂದು ಸ್ಪಷ್ಟನೆ ನೀಡಿದರು. 

ತಮ್ಮ ವಿರುದ್ಧ ಕೇಳಿಬರುತ್ತಿರುವ 25 ಕೋಟಿ ರೂಪಾಯಿ ಲಂಚ ಆರೋಪ ನಿರಾಧಾರವಾಗಿದ್ದು, ಕ್ರೂಸ್ ಡ್ರಗ್ ಕೇಸಿನ ವಿಚಾರಣೆಯನ್ನು ನ್ಯಾಯಬದ್ಧವಾಗಿ ನಡೆಸಿದ್ದು ಅದಕ್ಕೆ ಈಗಲೂ ಶೇಕಡಾ 100ರಷ್ಟು ಬದ್ಧನಾಗಿದ್ದೇನೆ ಎಂದಿದ್ದಾರೆ.

ನನ್ನ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತವಾಗಿದ್ದು ನಾನು ಯಾವುದೇ ತನಿಖೆ ಎದುರಿಸಲು ಸಿದ್ದ, ಡ್ರಗ್ ಕೇಸಿನಲ್ಲಿ ನಾನು ನಿಷ್ಪಕ್ಷಪಾತವಾಗಿ, ನ್ಯಾಯಬದ್ಧವಾಗಿ ತನಿಖೆ ನಡೆಸಿದ್ದೇನೆ ಎಂದಿದ್ದಾರೆ. 

ಇನ್ನು ಈ ಬಗ್ಗೆ ನಿನ್ನೆ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದ ಎನ್ ಸಿಬಿ ಅಧಿಕಾರಿ ಜ್ಞಾನೇಶ್ವರ ಸಿಂಗ್, ಎನ್ ಸಿಬಿ ಎಂಬುದು ವೃತ್ತಿಪರ ಸಂಸ್ಥೆಯಾಗಿದ್ದು ನಮ್ಮ ಅಧಿಕಾರಿಗಳು ಅಥವಾ ಸಿಬ್ಬಂದಿ ವಿರುದ್ಧ ಯಾವುದೇ ಆರೋಪ ಕೇಳಿಬಂದರೂ ನಾವು ಮುಕ್ತವಾಗಿ ತನಿಖೆ ನಡೆಸಲು ಸಿದ್ದರಿದ್ದೇವೆ. ಡ್ರಗ್ ಕೇಸಿನ ತನಿಖೆ ಪಾರದರ್ಶಕವಾಗಿ ನ್ಯಾಯಬದ್ಧವಾಗಿರುತ್ತದೆ ಎಂದರು. ಹಾಗಾದರೆ ಸಮೀರ್ ವಾಂಖೆಡೆಯವರೇ ಈ ಕೇಸಿನ ತನಿಖೆ ಮುಂದುವರಿಸುತ್ತಾರೆಯೇ ಎಂದು ಕೇಳಿದಾಗ ಈ ಪ್ರಶ್ನೆಗೆ ಈಗಲೇ ಉತ್ತರ ಹೇಳಲು ಸಾಧ್ಯವಿಲ್ಲ. ತನಿಖೆಯ ಪ್ರಗತಿ ಮತ್ತು ಸಾಕ್ಷಿಗಳನ್ನು ಕಲೆ ಹಾಕಿದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com