ಮಹಿಳೆಯರ ಎನ್ ಡಿ ಎ ಪ್ರವೇಶಕ್ಕೆ ಸೇನೆ ಒಪ್ಪಿಗೆ: ಸುಪ್ರೀಂಗೆ ಕೇಂದ್ರ ಹೇಳಿಕೆ

ಭಾರತೀಯ ಸೇನೆ ಜಗತ್ತಿನಲ್ಲೇ ಗೌರವಯುತ ಸಂಸ್ಥೆ, ಲಿಂಗ ಸರಿಸಮಾನತೆ ವಿಚಾರದಲ್ಲಿ ಅದಿನ್ನೂ ಹಲವು ಸುಧಾರಣೆಗಳನ್ನು ತರಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಸೇನೆ ಮಹಿಳೆಯರು ಎನ್ ಡಿ ಎ ಸೇರಲು ಒಪ್ಪಿಗೆ ಸೂಚಿಸಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 

ಸೇನೆಯ ಅತ್ಯುನ್ನತ ವಲಯದಲ್ಲಿ ನಡೆದ ಮಾತುಕತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ತಿಳಿಸಿದ್ದಾರೆ.

ಬಹಳ ಸಮಯದಿಂದ ಎನ್ ಡಿ ಎ ಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಬಂದಿತ್ತು. ಸೇನೆಯ ಉನ್ನತಾಧಿಕಾರಿಗಳು ತಾವಗಿಯೇ ಈ ತೀರ್ಮಾನ ಕೈಗೊಳ್ಲಬೇಕೆಂದು ನ್ಯಾಯಾಲಯ ಆಶಿಸಿತ್ತು. ಈ ವಿಚಾರದಲ್ಲಿ ನ್ಯಾಯಾಲಯ ಪ್ರವೇಶಿಸಲು ಇಚ್ಛಿಸಿರಲಿಲ್ಲ ಎಂದು ಜಸ್ಟೀಸ್ ಎಂ.ಎಂ ಸುಂದ್ರೇಶ್ ತಿಳಿಸಿದ್ದಾರೆ. 

ಸೇನೆಯ ನಿರ್ಧಾರಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆ ಜಗತ್ತಿನಲ್ಲೇ ಗೌರವಯುತ ಸಂಸ್ಥೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅದಕ್ಕಿದೆ. ಆದರೆ ಲಿಂಗ ಸರಿಸಮಾನತೆ ವಿಚಾರದಲ್ಲಿ ಅದಿನ್ನೂ ಹಲವು ಸುಧಾರಣೆಗಳನ್ನು ತರಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com