The New Indian Express
ವಿಜಯವಾಡ: ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪರಿಚಯವಾದ ವಂಚಕನೋರ್ವ ಯುವತಿಯನ್ನು ನಂಬಿಸಿ ಹಣ ಪಡೆದು ಮೋಸ ಮಾಡಿರುವ ಘಟನೆ ಆಂದ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ವಂಚಕ ಮ್ಯಾಟ್ರಿಮೋನಿಯಲ್ ತಾಣದಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದ. ಆತನೇ ಓರ್ವ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಯುವತಿಯ ಬಳಿ ತಾನು ಅಮೆರಿಕದಲ್ಲಿ ಸಾಫ್ಟ್ ವೇರ್ ಉದ್ಯೋಗಿಯೆಂದು ಪರಿಚಯಿಸಿಕೊಂಡಿದ್ದ.
ಇದನ್ನೂ ಓದಿ: ಎಸ್ಎಂಎಸ್ ಹುಡುಗಿ 'ಮೀನಾ' ಆಮಿಷ ಒಡ್ಡಿ ಪುರುಷರನ್ನು ವಂಚಿಸುವ ಜಾಲ ಪತ್ತೆ!
ಕೆಲ ದಿನಗಳ ತರುವಾಯ ತಾನು ಅಮೆರಿಕದಿಂದ ಭಾರತಕ್ಕೆ ಮರಳಲು ಅರ್ಜೆಂಟಾಗಿ 12 ಲಕ್ಷ ರೂ. ಬೇಕು ಎಂದು ಯುವತಿ ಬೆಳಿ ಬೇಡಿಕೆ ಇಟ್ಟಿದ್ದ. ವಂಚಕನ ಬಲೆಗೆ ಬಿದ್ದಿದ್ದ ಯುವತಿ ಬ್ಯಾಂಕಿನಲ್ಲಿ 12 ಲಕ್ಷ ಲೋನ್ ಮಾಡಿ ಆ ಯುವಕನಿಗೆ ನೀಡಿದ್ದಳು.
ಇದಾದ ನಂತರ ವಂಚಕ ಯುವತಿಯ ಕರೆಗಳನ್ನು ಸ್ವೀಕರಿಸುವುದನ್ನು ಬಂದ್ ಮಾಡಿದ. ಇದರಿಂದಾಗಿ ತಾನು ಮೋದ ಹೋಗಿರುವುದು ತಿಳಿದು ಯುವತಿ ಪೊಲೀಸ್ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ: ನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆ
ಆತನ ಮೇಲೆ ಈ ಹಿಂದೆ 4 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದು ಯುವತಿಗೆ ಹಸ್ತಾಂತರ ಮಾಡಲಾಗಿದೆ.