ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು, ಬೂಸ್ಟರ್ ಡೋಸ್ ಕ್ರಮ ಅನೈತಿಕ: ಆಧಾರ್ ಪೂನಾವಾಲಾ

ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಮಕ್ಕಳ ಲಸಿಕೆ ಬಳಕೆಗೆ ಮುಕ್ತವಾಗಬಹುದು ಎಂದು ಸೆರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ.
ಆದಾರ್ ಪೂನಾವಾಲ
ಆದಾರ್ ಪೂನಾವಾಲ
Updated on

ಬೆಂಗಳೂರು: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಮಕ್ಕಳ ಲಸಿಕೆ ಬಳಕೆಗೆ ಮುಕ್ತವಾಗಬಹುದು ಎಂದು ಸೆರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಾವಾಲಾ, ಭಾರತದಲ್ಲಿ ವ್ಯಾಕ್ಸಿನ್ ಪ್ರಯೋಗ ಹಂತದಲ್ಲಿದ್ದು, ಬಹಳಷ್ಟು ಸ್ವಯಂ ಸೇವಕರಿಗೆ ನೀಡಲಾಗಿದೆ. ಅದನ್ನು ವಿಮರ್ಶೆ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ವ್ಯಾಕ್ಸಿನ್ ಪರಿಣಾಮಗಳ ಬಗ್ಗೆ ನಡೆಯುತ್ತಿರುವ ಪರಾಮರ್ಶೆ ಅಂತ್ಯವಾಗಲಿದ್ದು, ಬಳಿಕ ಸಾರ್ವಜನಿಕ ಬಳಕೆಗೆ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ.  3-4 ತಿಂಗಳ ಅವಧಿಯಲ್ಲಿ ವ್ಯಾಕ್ಸಿನ್ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತಿದೆ. ವ್ಯಾಕ್ಸಿನ್ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆದಿದ್ದು, ಹಂತ ಹಂತವಾಗಿ ಈ ಬಗ್ಗೆ ವರದಿಗಳು ಬರಲಿದೆ ಎಂದು ಹೇಳಿದರು.

ಬೂಸ್ಟರ್ ಡೋಸ್ ಕ್ರಮ ಅನೈತಿಕ
ಇದೇ ವೇಳೆ ಬೂಸ್ಟರ್ ಡೋಸ್ ಕ್ರಮ ಅನೈತಿಕ ಎಂದು ಅಭಿಪ್ರಾಯಪಟ್ಟಿರುವ ಆಧಾರ್ ಪೂನಾವಾಲಾ ಅವರು, 'ದೇಶದಲ್ಲಿ ಎರಡು ಡೋಸ್‌ಗಳನ್ನು ಪಡೆಯಲು ಕೂಡಾ ದೊಡ್ಡ ಸಂಖ್ಯೆಯ ಮಂದಿ ಬಾಕಿ ಇರುವ ಹಂತದಲ್ಲಿ ಬೂಸ್ಟರ್ ಡೋಸ್‌ಗೆ ಚಾಲನೆ ನೀಡುವುದು ಅನೈತಿಕ ಕ್ರಮ. ಹಲವು ದೇಶಗಳಲ್ಲಿ ಬಹಳಷ್ಟು ಮಂದಿ ಇನ್ನೂ ಮೊದಲ ಡೋಸ್ ಕೂಡಾ ಪಡೆಯಲು ಸಾಧ್ಯವಾಗಿಲ್ಲ. 

ಮೂರನೇ ಡೋಸ್ ಕಡ್ಡಾಯ ಹಾಗೂ ಎರಡನೇ ಡೋಸ್ ಪಡೆದ ಆರು ತಿಂಗಳ ಒಳಗಾಗಿ ಈ ಡೋಸ್ ಪಡೆಯಬೇಕು ಎಂದು ಎಸ್‌ಐಐ ಅಧ್ಯಕ್ಷ ಸೈರಸ್ ಪೂನಾವಾಲ ಹೇಳಿಕೆ ನೀಡಿದ ಬೆನ್ನಲ್ಲೇ ಅದರ್ ಹೇಳಿಕೆ ಅಚ್ಚರಿ ತಂದಿದೆ. ಬಯೋಕಾನ್ ಜತೆಗಿನ ಪ್ರಮುಖ ಪಾಲುದಾರಿಕೆ ಬಗೆಗಿನ ಘೋಷಣೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಂದೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ಕೆಲ ವರ್ಗಕ್ಕೆ ಬೂಸ್ಟರ್ ಡೋಸ್ ನೀಡಬಹುದು ಎಂಬ ಅರ್ಥದಲ್ಲಿ ತಂದೆಯವರು ಮಾತನಾಡಿರಬಹುದು" ಎಂದು ಹೇಳಿದರು.

ಮೂರನೇ ಡೋಸ್ ಅಗತ್ಯ ಎನ್ನುವುದನ್ನು ಸಾಬೀತುಪಡಿಸುವ ಯಾವ ಪುರಾವೆಯೂ ಇಲ್ಲ. ಅಧಿಕೃತವಾಗಿ ಇದನ್ನು ಶಿಫಾರಸ್ಸು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಮುಂದೆ ಬೂಸ್ಟರ್ ಡೋಸ್ ವಾರ್ಷಿಕವಾಗಿ ಬೇಕಾಗಬಹುದು. ಆದರೆ ಸದ್ಯಕ್ಕೆ ಅದು ಅಗತ್ಯವಿಲ್ಲ. ಸದ್ಯಕ್ಕೆ ಬೂಸ್ಟರ್ ಶಾಟ್ ಬಗ್ಗೆ ಚಿಂತಿಸುವುದು ಅನೈತಿಕ. ಆದಾಗ್ಯೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಈಗಾಗಲೇ ಸಂಗ್ರಹಿಸಿರುವ ಅಂಕಿ ಅಂಶಗಳ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ಹೇಳಿದರು. 

ಅಮೇರಿಕದ ಲಸಿಕೆ ತಯಾರಕ ಸಂಸ್ಥೆ ನೊವೊವಾಕ್ಸ್ ಇಂಕ್ ಮಕ್ಕಳಿಗಾಗಿ NVX-CoV2373 ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದೆ. ಇದು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೆರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಪ್ರಯೋಗಗಳನ್ನು ನಡೆಸಲಾಗುತ್ತಿದೆ. 2 ರಿಂದ 17 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದ್ದು, ದೇಶದ ಹತ್ತು ಪ್ರದೇಶಗಳಲ್ಲಿ 910 ಸ್ವಯಂ ಸೇವಕರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com