ಚಾಕಲೇಟು ಬಿಸ್ಕತ್ತು ಡಬ್ಬದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ: ಆಂಧ್ರದಲ್ಲಿ ಸೌದಿ ವಿಮಾನ ಪ್ರಯಾಣಿಕ ಸೆರೆ
ಆರೋಪಿ ವಿಮಾನದಿಂದ ಇಳಿದು ಲಗೇಜನ್ನು ಪಡೆದು ಹೊರ ಹೋಗುವುದರಲ್ಲಿದ್ದ. ಅಷ್ಟರಲ್ಲಿ ಆರೋಪಿ ಚಿನ್ನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು.
Published: 28th September 2021 11:45 AM | Last Updated: 28th September 2021 11:45 AM | A+A A-

ವಶಪಡಿಸಿಕೊಳ್ಳಲಾದ ಚಿನ್ನ
ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಿಸ್ಕತ್ತು, ಚಾಕಲೇಟು ಡಬ್ಬಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಸಮೇತ ಗಣೇಶ ವಿಸರ್ಜನೆ: ಮೂರು ದಿನಗಳ ಬಳಿಕ ಹುಡುಕಿ ತೆಗೆದ ಸ್ಕೂಬಾ ಡೈವರ್ಸ್!
ಬಂಧಿತ ವ್ಯಕ್ತಿ ಸೌದಿಯ ರಿಯಾದ್ ನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ. ಒಟ್ಟು 768.66 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಒಟ್ಟು ಮೌಲ್ಯ 34.24 ಲಕ್ಷ ರೂ.
ಇದನ್ನೂ ಓದಿ: ಬ್ಯಾಂಕ್ ಲಾಕರ್ ನಿಂದ 6 ಕೆಜಿ ಚಿನ್ನ ಕಳವು: ಸಿಬ್ಬಂದಿಗಾಗಿ ಪೊಲೀಸರ ಹುಡುಕಾಟ
ಆರೋಪಿ ವಿಮಾನದಿಂದ ಇಳಿದು ಲಗೇಜನ್ನು ಪಡೆದು ಹೊರ ಹೋಗುವುದರಲ್ಲಿದ್ದ. ಅಷ್ಟರಲ್ಲಿ ಆರೋಪಿ ಚಿನ್ನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಒಡನೆಯೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗಾಗಿ ಹುಡುಕಾಟ ಶುರುಮಾಡಿದ್ದರು. ಆತನನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಿದಾಗ ಆತನ ಲಗೇಜಿನಲ್ಲಿ ಚಿನ್ನ ಇರುವುದು ಪತ್ತೆಯಾಗಿದ್ದರಿಂದ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿ ವಂಚಿಸಿದವನ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ