ದೇಶದಲ್ಲಿ ಎಚ್ಐವಿ ಕ್ಷೀಣಿಸುತ್ತಿದೆ, ಆದರೆ ಇನ್ನೂ 51 ಸಾವಿರ ಮಕ್ಕಳು ಸೇರಿದಂತೆ 24.01 ಲಕ್ಷ ರೋಗಿಗಳಿದ್ದಾರೆ

ಭಾರತದಲ್ಲಿ ಎಚ್‌ಐವಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ 51,000 ಮಕ್ಕಳು ಸೇರಿದಂತೆ ಅಂದಾಜು 24.01 ಲಕ್ಷ ರೋಗಿಗಳಿದ್ದಾರೆ. ಈ ರೋಗಿಗಳಲ್ಲಿ ಹೆಚ್ಚಿನವರು ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಭಾರತದಲ್ಲಿ ಎಚ್‌ಐವಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ 51,000 ಮಕ್ಕಳು ಸೇರಿದಂತೆ ಅಂದಾಜು 24.01 ಲಕ್ಷ ರೋಗಿಗಳಿದ್ದಾರೆ. ಈ ರೋಗಿಗಳಲ್ಲಿ ಹೆಚ್ಚಿನವರು ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಎಂಟು ರಾಜ್ಯಗಳಲ್ಲಿ ಕೇಂದ್ರೀಕೃತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

ಸರ್ಕಾರದ 2021 ಎಚ್ಐವಿ ವರದಿಯ ಪ್ರಕಾರ, ಭಾರತದಲ್ಲಿ ಎಚ್ಐವಿ(PLHIV) ಸೋಂಕಿತರ ಸಂಖ್ಯೆ 24.01 ಲಕ್ಷ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಒಟ್ಟು ಸೋಂಕಿತರಲ್ಲಿ ಸುಮಾರು ಶೇ. 45 ರಷ್ಟು (10.83 ಲಕ್ಷ) ಮಹಿಳೆಯರು ಮತ್ತು ಶೇ. 2 ರಷ್ಟು ಅಂದರೆ ಸುಮಾರು 51,000 ಸೋಂಕಿತರು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಎಚ್ಐವಿ ಸೋಂಕಿತರಿದ್ದು(3.94 ಲಕ್ಷ), ಆಂಧ್ರಪ್ರದೇಶ (3.21 ಲಕ್ಷ), ಕರ್ನಾಟಕ (2.76 ಲಕ್ಷ), ಉತ್ತರ ಪ್ರದೇಶ (1.78 ಲಕ್ಷ), ತಮಿಳುನಾಡು (1.63 ಲಕ್ಷ), ತೆಲಂಗಾಣ (1.56 ಲಕ್ಷ), ಬಿಹಾರ. (1.43 ಲಕ್ಷ), ಮತ್ತು ಗುಜರಾತ್ 1.14 ಲಕ್ಷ ಸೋಂಕಿತರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com