ಮುಂಬೈ: ಪ್ರೇಯಸಿಯನ್ನು ಕಟ್ಟಡದ ನೀರಿನ ಟ್ಯಾಂಕ್‌ ಮೇಲಿಂದ ತಳ್ಳಿ ಕೊಲೆಗೆ ಯತ್ನಿಸಿದ ವ್ಯಕ್ತಿ ಬಂಧನ

ಬಿಪಿಒ ಉದ್ಯೋಗಿಯಾಗಿದ್ದ ಪ್ರೇಯಸಿಯನ್ನು ಉಪನಗರದ ದಹಿಸರ್‌ನ ಕಟ್ಟಡದ ವಾಟರ್ ಟ್ಯಾಂಕ್‌ ಮೇಲಿಂದ ತಳ್ಳಿ ಕೊಲ್ಲಲು ಯತ್ನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮುಂಬೈ: ಬಿಪಿಒ ಉದ್ಯೋಗಿಯಾಗಿದ್ದ ಪ್ರೇಯಸಿಯನ್ನು ಉಪನಗರದ ದಹಿಸರ್‌ನ ಕಟ್ಟಡದ ವಾಟರ್ ಟ್ಯಾಂಕ್‌ ಮೇಲಿಂದ ತಳ್ಳಿ ಕೊಲ್ಲಲು ಯತ್ನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಆರೋಪಿಯ ಸ್ನೇಹಿತರೊಬ್ಬರು ವಾಸಿಸುವ ಕಟ್ಟಡದಲ್ಲಿ ಭಾನುವಾರ ನಸುಕಿನ ವೇಳೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಸಂತ್ರಸ್ತೆ ಪ್ರಿಯಾಂಗಿ ಸಿಂಗ್ ಅವರು, 15ನೇ ಮಹಡಿಯ ಕಟ್ಟಡದ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ನಿಂದ 18 ಅಡಿ ಕೆಳಗೆ ಬಿದ್ದಿದ್ದಾರೆ ಎಂದು ದಹಿಸರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಇಸಿದ್ದಾರೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಆರೋಪಿ ಮದ್ಯದ ಅಮಲಿನಲ್ಲಿದ್ದ ಮತ್ತು ಅವರು ನೀರಿನ ಟ್ಯಾಂಕ್ ಮೇಲೆ ಕುಳಿತಿದ್ದಾಗ ಪ್ರಿಯಾಂಗಿಯೊಂದಿಗೆ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ಆಕೆಯನ್ನು ಟ್ಯಾಂಕ್ ಮೇಲಿಂದ ಕೆಳಗೆ ತಳ್ಳಿದ್ದಾನೆ ಎಂದು ಅವರು ಹೇಳಿದ್ದಾರೆ.

ಸದ್ಯ ಆಕೆಯ ಬೆನ್ನುಮೂಳೆಗೆ ಗಂಭೀರ ಗಾಯವಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ಬೋರಿವಲಿ (ಪಶ್ಚಿಮ) ನಿವಾಸಿಯಾಗಿದ್ದು, ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಮಲಾಡ್‌ನಲ್ಲಿ ವಾಸಿಸುತ್ತಿದ್ದಳು.

'ಘಟನೆಯ ನಂತರ ಪ್ರಿಯಾಂಗಿಯನ್ನು ಮೊದಲು ತನ್ನ ಬೋರಿವ್ಲಿ ಫ್ಲಾಟ್‌ಗೆ ಕರೆದೊಯ್ಯಲು ಮತ್ತು ನಂತರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಕೆಯ ಮಲಾಡ್ ನಿವಾಸಕ್ಕೆ ಕರೆದೊಯ್ಯಲು ಆರೋಪಿ ಕ್ಯಾಬ್ ಅನ್ನು ಬುಕ್ ಮಾಡಿದ್ದ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಕಟ್ಟಡದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ಅವರು ಹೇಳಿದರು.

ಶಾಲೆಯಿಂದಲೂ ಆರೋಪಿ ಮತ್ತು ಸಂತ್ರಸ್ತೆಗೆ ಪರಸ್ಪರ ಪರಿಚಯವಿತ್ತು. ಆರೋಪಿಯು ಮೂರು ತಿಂಗಳ ಹಿಂದೆ ಬಿಪಿಒ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅವರು ಆಗಾಗ್ಗೆ ಜಗಳವಾಡುತ್ತಿದ್ದರು, ಆದರೆ ಈ ಬಾರಿ ಅದು ವಿಕೋಪಕ್ಕೆ ತಿರುಗಿದೆ ಎಂದು ಅಧಿಕಾರಿ ಹೇಳಿದರು.

ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com