'ಮಸಾಜ್ ಸೇವೆ ನೀಡಿದ್ದು ಕೈದಿ, ಫಿಸಿಯೋ ಅಲ್ಲ'; ತಿಹಾರ್ ಜೈಲಿನ ಮೂಲಗಳ ಹೇಳಿಕೆ; ಇಕ್ಕಟ್ಟಿನಲ್ಲಿ ಕೇಜ್ರಿವಾಲ್ ಸರ್ಕಾರ!

ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಜೈಲಿನಲ್ಲಿ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಸಹ ಕೈದಿಯೇ ಹೊರತು ಫಿಸಿಯೋ ಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಜೈಲಲ್ಲಿ ಸತ್ಯೇಂದ್ರ ಜೈನ್ ಮಸಾಜ್ ಸೇವೆ
ಜೈಲಲ್ಲಿ ಸತ್ಯೇಂದ್ರ ಜೈನ್ ಮಸಾಜ್ ಸೇವೆ

ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಜೈಲಿನಲ್ಲಿ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಸಹ ಕೈದಿಯೇ ಹೊರತು ಫಿಸಿಯೋ ಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ  ಹಾಕಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ತಳ್ಳಿ ಹಾಕಿತ್ತು. ಅಲ್ಲದೆ ಜೈನ್ ಅವರು ಬೆನ್ನು ನೋವಿಗೆ ಫಿಸಿಯೋ ಥೆರಪಿಸ್ಟ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಸತ್ಯೇಂದ್ರ ಜೈನ್ ಗೆ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಫಿಸಿಯೋ ಅಲ್ಲ.. ಬದಲಿಗೆ ಆತ ತಿಹಾರ್ ಜೈಲಿನ ಸಹ ಕೈದಿಯಾಗಿದ್ದು, ಈ ಹಿಂದೆ 10 ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿ ಜೈಲು ಪಾಲಾಗಿರುವ ಕೈದಿ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.

ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ, ಭದ್ರತಾ ವೀಡಿಯೋಗಳಲ್ಲಿ ಆಪ್ ಸಚಿವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ರಿಂಕು ಎಂದು.. ಆತ ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾನೂನಿನ ಅಡಿಯಲ್ಲಿ ಅತ್ಯಾಚಾರದ ಆರೋಪ ಹೊರಿಸಲಾದ ಕೈದಿಯಾಗಿದ್ದಾನೆ. ಕಳೆದ ವರ್ಷ 10ನೇ ತರಗತಿ ವಿದ್ಯಾರ್ಥಿನಿಯಾದ ತನ್ನ ಸ್ವಂತ ಮಗಳು ಆತನ ಮೇಲೆ ಹಲ್ಲೆ ನಡೆಸಿದ ದೂರು ದಾಖಲಿಸಿದ್ದಳು. ಹೀಗಾಗಿ ಅತನನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ ಕೆಲವೇ ದಿನಗಳಲ್ಲಿ ಈ ವಿಡಿಯೋಗಳು ಹೊರಬಿದ್ದಿತ್ತು. ಸೆಪ್ಟೆಂಬರ್ 13, 14 ಮತ್ತು 21 ರ ದಿನಾಂಕದ ಸಿಸಿಟಿವಿ ವೀಡಿಯೋಗಳು ವ್ಯಾಪಕ ವೈರಲ್ ಆಗಿತ್ತು. ಈ ಘಟನೆ ಡೈರೆಕ್ಟರ್ ಜನರಲ್ (ಜೈಲು ಮುಖ್ಯ ಅಧೀಕ್ಷಕ), ಸಂದೀಪ್ ಗೋಯೆಲ್ ಅವರನ್ನು ಹೊರತುಪಡಿಸಿ ಕನಿಷ್ಠ 12 ತಿಹಾರ್ ಜೈಲು ಅಧಿಕಾರಿಗಳನ್ನು ವರ್ಗಾಯಿಸಲು ಕಾರಣವಾಯಿತು.

ಮತ್ತೆ ಆಪ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
"ಅತ್ಯಾಚಾರ ಆರೋಪಿ ರಿಂಕು ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡುತ್ತಿದ್ದರು. ಪೋಕ್ಸೋ ಮತ್ತು ಐಪಿಸಿ 376 ರ ಅಡಿಯಲ್ಲಿ ರಿಂಕು ಆರೋಪಿ. ಹಾಗಾಗಿ ಸತ್ಯೇಂದ್ರ ಜೈನ್‌ಗೆ ಮಾಲಿಷ್ ನೀಡುತ್ತಿದ್ದ ಫಿಸಿಯೋಥೆರಪಿಸ್ಟ್ ಅಲ್ಲ ರೇಪಿಸ್ಟ್! ಶಾಕಿಂಗ್.. ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಹಿಂದಿನ ಹೇಳಿಕೆಗೆ ತಾವು ಬದ್ಧರಾಗಿದ್ದು, ಅದು ಫಿಸಿಯೋ ಥೆರಪಿ ಎಂದು ಹೇಳಿದ್ದಾರೆ.ಸೋಮವಾರವೂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಚಿವರಿಗೆ ವಿಐಪಿ ಚಿಕಿತ್ಸೆ ನೀಡಿದ ಬಿಜೆಪಿ ಆರೋಪವನ್ನು ಬಲವಾಗಿ ತಳ್ಳಿಹಾಕಿದರು, "ಫಿಸಿಯೋಥೆರಪಿ, ಮಸಾಜ್ ಅಲ್ಲ" ಎಂಬ ವಾದಕ್ಕೆ ಅಂಟಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com