ವ್ಲೋಗರ್ ರಶೀದಾ-ನಿಶಾದ್
ವ್ಲೋಗರ್ ರಶೀದಾ-ನಿಶಾದ್

68 ವರ್ಷದ ಮುದುಕನಿಗೆ ಹನಿಟ್ರ್ಯಾಪ್: ತನ್ನ ಹೆಂಡತಿಯನ್ನೇ 'ಪಲ್ಲಂಗ' ಹತ್ತಿಸಿದ ವ್ಲೋಗರ್ ನಿಶಾದ್!

ಕಲ್ಪಕಂಚೇರಿ ನಿವಾಸಿ 68 ವರ್ಷದ ವ್ಯಕ್ತಿಯನ್ನು ಹನಿ ಟ್ರ್ಯಾಪ್‌ ಮೂಲಕ ವಂಚಿಸಿ 23 ಲಕ್ಷ ಸುಲಿಗೆ ಮಾಡಿದ ಪ್ರಕರಣದಲ್ಲಿ ವ್ಲಾಗರ್ ದಂಪತಿಯನ್ನು ಬಂಧಿಸಲಾಗಿದೆ. 
Published on

ಮಲಪ್ಪುರಂ: ಕಲ್ಪಕಂಚೇರಿ ನಿವಾಸಿ 68 ವರ್ಷದ ವ್ಯಕ್ತಿಯನ್ನು ಹನಿ ಟ್ರ್ಯಾಪ್‌ ಮೂಲಕ ವಂಚಿಸಿ 23 ಲಕ್ಷ ಸುಲಿಗೆ ಮಾಡಿದ ಪ್ರಕರಣದಲ್ಲಿ ವ್ಲಾಗರ್ ದಂಪತಿಯನ್ನು ಬಂಧಿಸಲಾಗಿದೆ. 

ಮಲಪ್ಪುರಂ ತಾನೂರ್ ಮೂಲದ 30 ವರ್ಷದ ರಶೀದಾ ಮತ್ತು ಆಕೆಯ ಪತಿ ಕುನ್ನಂಕುಲಂ ಮೂಲದ 36 ನಿಶಾದ್ ನನ್ನು ತ್ರಿಶೂರ್‌ನ ಬಾಡಿಗೆ ಮನೆಯಿಂದ ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದಾರೆ.

ರಶೀದಾ ಮತ್ತು ನಿಶಾದ್ ಯೂಟ್ಯೂಬ್ ವ್ಲಾಗರ್‌ಗಳು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರೂ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರಶೀದಾ ಅವರು ಕಲ್ಪಕಂಚೇರಿ ಮೂಲದ 68 ವರ್ಷದ ಪ್ರಮುಖ ಉದ್ಯಮಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ನಂತರ ಇಬ್ಬರೂ ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ಆಗಿ ಚಾಟಿಂಗ್ ಆರಂಭಿಸಿದ್ದರು.

ರಶೀದಾ ತನ್ನನ್ನು ಟ್ರಾವೆಲ್ ವ್ಲಾಗರ್ ಎಂದು ಪರಿಚಯಿಸಿಕೊಳ್ಳುವ ಮೂಲಕ ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಗೆಳೆತನ ಬೆಳೆಯುತ್ತಿದ್ದಂತೆ ಆಲುವಾದಲ್ಲಿನ ಫ್ಲಾಟ್‌ಗೆ ಅವರನ್ನೂ ಆಹ್ವಾನಿಸಲಾಯಿತು. ಪತಿಗೆ ಗೊತ್ತಿದ್ದರೂ ಯಾವುದೇ ತೊಂದರೆ ಇಲ್ಲ. ಇದಕ್ಕೆಲ್ಲ ಪತಿ ಒಪ್ಪುತ್ತಾರೆ ಎಂದು ಮಹಿಳೆ ಹೇಳಿದ್ದಳು. ಅದರಂತೆ ಉದ್ಯಮಿ ಆಲುವಾದಲ್ಲಿನ ಫ್ಲಾಟ್‌ಗೆ ಬಂದಿದ್ದರು. ಆಗ ದಂಪತಿಗಳು ಅಲ್ಲಿನ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ನಂತರ ಅದನ್ನು ತೋರಿಸಿ ಉದ್ಯಮಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 

ಕಳೆದ ಒಂದು ವರ್ಷದಿಂದ ದಂಪತಿ ವಿವಿಧ ಕಂತುಗಳಲ್ಲಿ 23 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫ್ಲಾಟ್‌ನ ದೃಶ್ಯಾವಳಿಗಳನ್ನು ಬಳಸುವ ಬೆದರಿಕೆ ಮುಂದುವರಿದಿದ್ದರಿಂದ, ಉದ್ಯಮಿ ಕೇಳಿದಾಗಲೆಲ್ಲಾ ಪಾವತಿಸಿದ್ದಾರೆ. ಕೊನೆಗೆ ಸಾಲ ತೀರಿಸಲು ಆರಂಭಿಸಿದಾಗ ಆತನ ಮನೆಯವರಿಗೆ ಘಟನೆ ತಿಳಿಯಿತು. ಇದರಿಂದ ಕುಟುಂಬಸ್ಥರು ಕಲ್ಪಕಂಚೇರಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ ಮಾಡಲಾಗಿದೆ. ನಿಶಾದ್ ನನ್ನು ಜೈಲಿಗೆ ಕಳುಹಿಸಲಾಗಿದೆ. ಆದರೆ ರಶೀದಾಗೆ ಇಬ್ಬರು ಚಿಕ್ಕ ಮಕ್ಕಳಿರುವುದರಿಂದ ಆಕೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com