'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ಗ್ಲೋಬ್' ಮಂತ್ರದೊಂದಿಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ: ಪ್ರಧಾನಿ ಮೋದಿ

'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ಗ್ಲೋಬ್' ಮಂತ್ರದೊಂದಿಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ವಡೋದರಾ (ಗುಜರಾತ್): 'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ಗ್ಲೋಬ್' ಮಂತ್ರದೊಂದಿಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ದಿ ಗ್ಲೋಬ್' ಮಂತ್ರದೊಂದಿಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಭಾರತವು ವಿಶ್ವದಲ್ಲಿ ದೊಡ್ಡ ಪ್ರಯಾಣಿಕ ವಿಮಾನಗಳ ತಯಾರಕ ದೇಶವಾಗಲಿಗೆ ಎಂದು ಹೇಳಿದರು. 

"ಭಾರತವನ್ನು ವಿಶ್ವದಲ್ಲಿ ದೊಡ್ಡ ಉತ್ಪಾದನಾ ಕೇಂದ್ರವನ್ನಾಗಿ ಮಾಡುವತ್ತ ನಮ್ಮ ಸರ್ಕಾರ ದಾಪುಗಾಲು ಇಡುತ್ತಿದೆ. ಭಾರತವು ತನ್ನ ಯುದ್ಧ ವಿಮಾನ, ಟ್ಯಾಂಕ್‌ಗಳು ಮತ್ತು ಜಲಾಂತರ್ಗಾಮಿ ನೌಕೆಯನ್ನು ತಯಾರಿಸುತ್ತಿದೆ ಮತ್ತು ಭಾರತದಲ್ಲಿ ತಯಾರಿಸಿದ ಔಷಧಿಗಳು ಮತ್ತು ಲಸಿಕೆಗಳು ಇಂದು ಜಗತ್ತಿನಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸುತ್ತಿವೆ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಭಾರತದಲ್ಲಿ ತಯಾರಾದ ಫೋನ್‌ಗಳು ಮತ್ತು ಕಾರುಗಳು ಪ್ರಪಂಚದ ಹಲವಾರು ದೇಶಗಳಲ್ಲಿ ಓಡಾಡುತ್ತಿದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ಗ್ಲೋಬ್ ಮಂತ್ರದೊಂದಿಗೆ ಭಾರತವು ನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಇದೀಗ "ಭಾರತ ಸಾರಿಗೆ ವಿಮಾನಗಳ ತಯಾರಕ ದೇಶವೂ ಆಗಲಿದ್ದು, ತಯಾರಿಕಾ ಘಟಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಪಂಚದ ದೊಡ್ಡ ಪ್ರಯಾಣಿಕ ವಿಮಾನಗಳು ನಾವು ನೋಡಲಿದ್ದೇವೆ.  ಅವುಗಳ ಮೇಲೆ 'ಮೇಡ್ ಇನ್ ಇಂಡಿಯಾ' ಎಂದು ಬರೆಯಲಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. 

ಗುಜರಾತ್‌ನಲ್ಲಿ ಇಂದು ಪ್ರಾರಂಭಿಸಲಾದ ಸೌಲಭ್ಯವು "ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳನ್ನು ಪರಿವರ್ತಿಸುವ" ಶಕ್ತಿಯನ್ನು ಹೊಂದಿದೆ."ಇಂದು ವಡೋದರಾದಲ್ಲಿ ಪ್ರಾರಂಭಿಸಲಾದ ಸೌಲಭ್ಯವು ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ಇದೇ ಮೊದಲ ಬಾರಿಗೆ ದೇಶದ ರಕ್ಷಣಾ ಏರೋಸ್ಪೇಸ್ ಕ್ಷೇತ್ರದಲ್ಲಿ ಇಂತಹ ದೊಡ್ಡ ಹೂಡಿಕೆ ಮಾಡಲಾಗುತ್ತಿದೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com