ಪಿಟ್ ಬುಲ್ ನಾಯಿ ದಾಳಿ ಮಾಡಿದ ಬಾಲಕನ ಮುಖಕ್ಕೆ 200 ಹೊಲಿಗೆ!

ಗಾಜಿಯಾಬಾದ್ ನಲ್ಲಿ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದ ವಿಡಿಯೋ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ:  ಗಾಜಿಯಾಬಾದ್ ನಲ್ಲಿ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಕಳೆದ ವಾರ ನಡೆದ ದಾಳಿಯಲ್ಲಿ ಗಾಯಗೊಂಡ ಬಾಲಕನ ಮುಖಕ್ಕೆ ಸುಮಾರು 200 ಹೊಲಿಗೆ ಹಾಕಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಯಿ ಬಾಲಕನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಉತ್ತರ ಪ್ರದೇಶದ ಸಾಕು ನಾಯಿಗಳ ದಾಳಿಯ ಎರಡು ಆಘಾತಕಾರಿ ಘಟನೆಗಳು ಹೊರಬಂದ ಕೆಲವೇ ದಿನಗಳಲ್ಲಿ ಇತ್ತೀಚಿನ ಘಟನೆ ನಡೆದಿದೆ.

ಹುಡುಗಿಯೊಬ್ಬಳು ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದು, ಆ ನಾಯಿ ಹಠಾತ್ತನೆ ಮಗುವಿನ ಮೇಲೆ ದಾಳಿ ಮಾಡುತ್ತದೆ. ಮುಂದಿನ ದೃಶ್ಯಾವಳಿಯಲ್ಲಿ ಒಬ್ಬ ವ್ಯಕ್ತಿ ಮಗುವನ್ನು ರಕ್ಷಿಸುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಾಗಲೇ ಪುಷ್ಪ್ ತ್ಯಾಗಿ ಅವರ ಮುಖದ ಒಂದು ಭಾಗವನ್ನು ನಾಯಿ ಕಚ್ಚಿತ್ತು.

ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ಪ್ರಾಣಿಯನ್ನು ಸಾಕಿದ್ದ ನಾಯಿಯ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಸೆಪ್ಟೆಂಬರ್ 3 ರಂದು ನಡೆದ ದಾಳಿಯ ನಂತರ ಸಾಕುಪ್ರಾಣಿಗಳು ಮಕ್ಕಳನ್ನು ಬೇಟೆಯಾಡುತ್ತಿರುವ ಬಗ್ಗೆ ಬಾಲಕನ ಕುಟುಂಬ ಮತ್ತು ಕೋಪಗೊಂಡ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಕ್ಕಳು ಆಟವಾಡಲು ಹೋಗುವ ಉದ್ಯಾನವನಗಳಲ್ಲಿ ಪ್ರಾಣಿಗಳನ್ನು ಬಿಡುವುದು ತಪ್ಪು ಎಂದು  ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com